ಭಾನುವಾರ, ಏಪ್ರಿಲ್ 11, 2021
25 °C

ಅದ್ಭುತ ಸೀರೆಯ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ರೇಷ್ಮೆ ಸೀರೆ ಮತ್ತು ವಸ್ತ್ರಾಭರಣಗಳ ಅದ್ಭುತ ಲೋಕವೇ ಅನಾವರಣಗೊಂಡಿದೆ. ಕರ್ನಾಟಕ, ಆಂಧ್ರ, ತಮಿಳುನಾಡಿನ ನೇಕಾರರ ಕಸೂತಿಯ ಸೊಬಗು ಅಲ್ಲಿ ಕಣ್ಸೆಳೆಯುವಂತಿದೆ. ಸಾಂಪ್ರದಾಯಿಕ ಸೀರೆ, ಮೈಸೂರು ಸಿಲ್ಕ್ ಸೀರೆ, ಖಾದಿ ಗ್ರಾಮೋದ್ಯೋಗದ ಸೀರೆಗಳು ಒಂದಕ್ಕೊಂದು ಸ್ಪರ್ಧೆಗೆ ನಿಂತವರಂತೆ ಕಾಣುತ್ತಿವೆ.ಗಿನ್ನಿಸ್ ದಾಖಲೆ ಪುಸ್ತಕ ಸೇರಿರುವ ರೇಷ್ಮೆ ಸೀರೆ ಜತೆಗೆ ಒಂದು ಲಕ್ಷ ಬಣ್ಣಗಳು ಇರುವ ಒಂದು ಲಕ್ಷ ರೂ ದರದ ರೇಷ್ಮೆ ಸೀರೆ ಈ ಬಾರಿಯ ಪ್ರದರ್ಶನದ ಹೈಲೈಟ್.ಸರ್ಕಾರ ಮತ್ತು ಖಾಸಗಿ ಪ್ರಾಯೋಜಕತ್ವದಲ್ಲಿ ಬುಧವಾರ ಆರಂಭವಾದ ಸಿಲ್ಕ್ ಉತ್ಸವ 2010ರಲ್ಲಿ ಇಂಥ ಇನ್ನೂ ಅನೇಕ ವಿಶೇಷಗಳಿವೆ. ಅ. 26ರ ವರೆಗೆ ನಡೆಯಲಿರುವ ಉತ್ಸವ ಬೆಂಗಳೂರಿಗರಿಗೊಂದು ವಿಶಿಷ್ಟ ಅನುಭವ ನೀಡಲಿದೆ.

ಮೇಳದಲ್ಲಿ ಪ್ರದರ್ಶಿಸಿರುವ ಕೆಎಸ್‌ಐಸಿ ರೇಷ್ಮೆ ಸೀರೆಗಳು ದೀರ್ಘಬಾಳಿಕೆ ಹಾಗೂ ಶುದ್ಧತೆಗೆ ಪ್ರಸಿದ್ಧಿಯಾಗಿವೆ. ಈ ಪಾರಂಪರಿಕ ಸೀರೆಗಳು ಮನೆತನದ ಒಡವೆಯಂತೆ ಅಜ್ಜಿಯಿಂದ ಮಗಳಿಗೆ, ಮಗಳಿಂದ ಮೊಮ್ಮಗಳಿಗೆ ಸಾಗಿ ಬಂದಿವೆ. ಅಂತಹ ಉತ್ಕೃಷ್ಟ ಸೀರೆಗಳ ಒಡತಿಯರನ್ನು ಗೌರವಿಸಿ ಪ್ರತಿಫಲ ನೀಡಲು ಕೆಎಸ್‌ಐಸಿ ಮುಂದಾಗಿದೆ. 

ಕನ್ನಡದ ಪ್ರಸಿದ್ಧ ಲೇಖಕಿ ಆರ್ಯಾಂಬ ಪಟ್ಟಾಭಿ ಬಳಿಯಿದ್ದ ಅಪೂರ್ವ ಕೆಎಸ್‌ಐಸಿ ಸೀರೆಯನ್ನು ಮೇಳದಲ್ಲಿ ಪ್ರದರ್ಶಿಸಲಾಗಿದೆ. 50ರ ದಶಕದಲ್ಲಿ ತಯಾರಿಸಿದ ಕರಾಚಿ ಪಲ್ಲುವಿನ ಜತೆ ಕಪ್ಪು ಬಣ್ಣದ ಡೈ ಹಾಕಲ್ಪಟ್ಟ ಈ ವಿಶಿಷ್ಟ ಸೀರೆಯ ಝರಿಯಲ್ಲಿ ಶೇಕಡ 65ರಷ್ಟು ಬೆಳ್ಳಿ ಹಾಗೂ ಶೇಕಡ 0.65ರಷ್ಟು ಚಿನ್ನದ ಎಳೆಗಳನ್ನು ಬಳಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.