ಶುಕ್ರವಾರ, ನವೆಂಬರ್ 22, 2019
19 °C

`ಅಧಿಕಾರಕ್ಕಾಗಿ ಕಿತ್ತಾಟವೇ ಬಿಜೆಪಿ ಸಾಧನೆ'

Published:
Updated:

ಕುಶಾಲನಗರ: ಕಳೆದ 5 ವರ್ಷಗಳಲ್ಲಿ ಪಕ್ಷದೊಳಗೆ ಅಧಿಕಾರಕ್ಕಾಗಿ ಕಿತ್ತಾಡಿಕೊಂಡಿದ್ದೇ ಬಿಜೆಪಿಯ ಸಾಧನೆ. ಅದನ್ನೇ ಅವರು ಮತದಾರರ ಮುಂದಿಡಬೇಕು ಅಷ್ಟೇ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಲೋಕೇಶ್ ವ್ಯಂಗ್ಯವಾಡಿದರು.ಕುಶಾಲನಗರದಲ್ಲಿ ಮಂಗಳವಾರ ರೋಡ್ ಶೋ ನಡೆಸಿ, ಪಕ್ಷದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬರೀ ಅಕ್ರಮ ಆಸ್ತಿ ಸಂಪಾದನೆ ವಿಷ ವರ್ತುಲಗಳಲ್ಲಿ ಸಿಲುಕಿದ್ದಾರೆ. ಇವುಗಳೇ ಅವರಿಗೆ ಉರುಳಾಗಲಿವೆ ಎಂದರು.ಹಿರಿಯ ಮುಖಂಡ ನರಸಿಂಹಮೂರ್ತಿ ಮಾತನಾಡಿ ಜೆಡಿಎಸ್ ಹಾಗೂ ಬಿಜೆಪಿಗಳ ಆಡಳಿತದ ಅವಧಿಯಲ್ಲಿ ಜನರು ನೊಂದಿದ್ದಾರೆ. ಹೀಗಾಗಿ ಮತದಾರ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಪಟ್ಟಣದ ಐ.ಬಿ. ರಸ್ತೆಯಿಂದ ರ‌್ಯಾಲಿ ಆರಂಭಿಸಿದ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಎಚ್.ಜೆ.ಕರಿಯಪ್ಪ, ಜಿಲ್ಲಾ ವಕ್ತಾರ ನೆರವಂಡ ಉಮೇಶ್, ನಗರಾಧ್ಯಕ್ಷ ಅಬ್ದುಲ್ ಖಾದರ್ ಇದ್ದರು.

ಪ್ರತಿಕ್ರಿಯಿಸಿ (+)