ಮಂಗಳವಾರ, ಮೇ 24, 2022
26 °C

ಅಧಿಕಾರಕ್ಕಾಗಿ ಗಂಡನಿಗೆ ವಿಚ್ಛೇದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾವಗಡ: ಅತ್ಯಂತ ಕಡಿಮೆ ಅವಧಿಯಲ್ಲಿ ವಿವಾಹ ವಿಚ್ಛೇದನ ಆದೇಶ ಮಧುಗಿರಿ ನ್ಯಾಯಾಲಯದಿಂದ ಶುಕ್ರವಾರ ಹೊರ ಬಿದ್ದಿದೆ.ಸುಜಾತಮ್ಮ ಎಂಬಾಕೆ ತನ್ನ ಗಂಡ ಶ್ರೀಶೈಲಮೂರ್ತಿ ಅವರಿಗೆ ವಿಚ್ಛೇದನ ನೀಡಿದ್ದಾರೆ. ಸುಜಾತಮ್ಮ ವೈ.ಎನ್.ಹೊಸಕೋಟೆ ಗ್ರಾಮದ ವಾಸಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ.ಗಂಡ ಶ್ರೀಶೈಲಮೂರ್ತಿ ನ್ಯಾಯದಗುಂಟೆ ಎಂಜಿಎಂ ಪ್ರೌಢಶಾಲೆ ಶಿಕ್ಷಕ. ‘ಗಂಡ ಕಳೆದ ಎರಡು ವರ್ಷಗಳಿಂದ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇವರ ಜೊತೆ ಇರಲು ಸಹಿಸಲಾಗದ ಹಿಂಸೆಯಾಗಿದೆ’ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು..ಹಬ್ಬಿದ ವದಂತಿ: ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಕ್ಷೇತ್ರದಿಂದ ಸುಜಾತಮ್ಮ ಆಯ್ಕೆಯಾಗಿದ್ದರು. ಗ್ರಾ.ಪಂ. ಅಧ್ಯಕ್ಷ ಸ್ಥಾನ ಬಿಸಿಎಂಬಿಗೆ ಮೀಸಲಾಗಿದೆ.

ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸುಜಾತಮ್ಮ ಜಾತಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಈಕೆ ಗಂಡ ಶಿಕ್ಷಕರಾಗಿದ್ದು, ಒಟ್ಟು ಆದಾಯ ರೂ. 2.5 ಲಕ್ಷ ಮೀರುವುದರಿಂದ ಬಿಸಿಎಂಬಿ ಪ್ರಮಾಣ ನೀಡಲು ನಿರಾಕರಿಸಿದ್ದರು.ಗ್ರಾ.ಪಂ. ಅಧ್ಯಕ್ಷ ಸ್ಥಾನ ಗಿಟ್ಟಿಸಲು ತುರ್ತಾಗಿ ಗಂಡನಿಗೆ ವಿಚ್ಛೇದನ ನೀಡಿದ್ದಾರೆ. ಇದರಿಂದ ಆದಾಯ ಕಡಿಮೆಯಾಗುವುದರಿಂದ ಜಾತಿ ಪ್ರಮಾಣಪತ್ರ ಪಡೆದು ಅಧಿಕಾರದ ಗದ್ದುಗೆಯೇರಲು ಸಹಕಾರಿಯಾಗಲಿದೆ ಎಂಬ ವದಂತಿ ವೈ.ಎನ್.ಹೊಸಕೋಟೆಯಲ್ಲಿ ಹಬ್ಬಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.