ಅಧಿಕಾರಕ್ಕೆ ಹಪಹಪಿಸದ ಬಿಜೆಪಿ

ಬುಧವಾರ, ಜೂಲೈ 17, 2019
25 °C

ಅಧಿಕಾರಕ್ಕೆ ಹಪಹಪಿಸದ ಬಿಜೆಪಿ

Published:
Updated:

ತರೀಕೆರೆ: ಬಿಜೆಪಿ ಎಂದೂ ಅಧಿಕಾರಕ್ಕಾಗಿ ಹಪಹಪಿಸದೆ ಸಮರ್ಥ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣದ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎನ್.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಶಿವಸುಬ್ರಹ್ಮಣ್ಯ ದೇವಾಲಯದ ಭದ್ರಗಿರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ `ಅಭ್ಯಾಸ ವರ್ಗ~ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕರ್ತರ ಕಾರ್ಯ ಕ್ಷಮತೆಯ ಆಧಾರದ ಮೇಲೆ 1979ರಲ್ಲಿ ಉದಯಿಸಿದ ಬಿಜೆಪಿ ಪಂಚ ತತ್ವದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ, ಯಡಿಯೂರಪ್ಪ, ಎ.ಕೆ.ಸುಬ್ಬಯ್ಯ ಮತ್ತು ಬಿ.ಬಿ.ಶಿವಪ್ಪನವರ ಮುಖಂಡತ್ವದಲ್ಲಿ ರಾಜ್ಯದಲ್ಲಿ ನೆಲೆಕಂಡ ಪಕ್ಷವಿಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ರಾಷ್ಟ್ರದ ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲದ ಶಿಸ್ತು ಬಿಜೆಪಿ ಪಕ್ಷದಲ್ಲಿದೆ, ಪಕ್ಷದ ಸಂಘಟನೆಯ ದೃಷ್ಠಿಯಿಂದ `ಅಭ್ಯಾಸ ವರ್ಗ~ದ ಮೂಲಕ ಮಾರ್ಗದರ್ಶನ ನೀಡಿದ್ದ  ಪಂಡಿತ್ ದೀನ್‌ದಯಾಳ್ ಅವರ ಆದರ್ಶ ಇತರೆ ಪಕ್ಷಗಳಿಗೆ ಮಾದರಿಯಾಗಿದೆ ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ಗಣೇಶ್‌ರಾವ್, ಜಿಲ್ಲಾ ಕೋಷ್ಟಕದ ಸಂಚಾಲಕ ರಾಘವೇಂದ್ರ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಾಂತರಾಜ್ ಮ್ಯಾಮ್‌ಕೋಸ್ ನಿರ್ದೇಶಕ ಆರ್.ದೇವಾನಂದ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಕೃಷ್ಣಮೂರ್ತಿ, ಕೆ.ಆರ್.ಆನಂದಪ್ಪ, ಶಂಬೈನೂರು ಆನಂದಪ್ಪ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾನಾಯ್ಕ, ಸದಸ್ಯರಾದ ಶಾರದ ವೇಲುಮುರುಗನ್, ಧರ್ಮೇಂದ್ರ, ದೀಪಾ ಉಮೇಶ್, ಎಪಿಎಂಸಿ ಸದಸ್ಯ ಭಾವಿಮನೆ ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry