ಅಧಿಕಾರದ ಚುಕ್ಕಾಣಿ ಜೆಡಿಎಸ್‌ಗೆ

7

ಅಧಿಕಾರದ ಚುಕ್ಕಾಣಿ ಜೆಡಿಎಸ್‌ಗೆ

Published:
Updated:

ಗಜೇಂದ್ರಗಡ: ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ, ಉತ್ತಮ ಆಡಳಿತಕ್ಕೆ ವೇದಿಕೆ ಒದಗಿಸಿಕೊಡಲಿದ್ದಾರೆ ಎಂದು ರಾಜ್ಯ ಯುವ ಘಟಕದ ಉಪಾಧ್ಯಕ್ಷ ಡಾ.ಮಂಜುನಾಥ ವಿಶ್ವಬ್ರಾಹ್ಮಣ ವಿಶ್ವಾಸ ವ್ಯಕ್ತಪಡಿಸಿದರು.ರೋಣ ಮತ ಕ್ಷೇತ್ರದ ಜೆಡಿಎಸ್ ಪಕ್ಷ ಸಂಘಟನೆಗೆ ಶುಕ್ರವಾರ ಸಮೀಪದ ಮ್ಯಾಕಲ್ ಝರಿ ಗ್ರಾಮದಲ್ಲಿ ಅಧಿಕೃತ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಡಳಿತಾವಧಿಯಲ್ಲಿ ಕೈಗೊಂಡ ಜನಪ್ರಿಯ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭೂತ ಪೂರ್ವ ಅಭಿವೃದ್ದಿ ಕಾರ್ಯಗಳು ನಡೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಜನತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿರುವ ತಾಲ್ಲೂಕಿನ ನಿಷ್ಠಾವಂತ ಕಾರ್ಯಕರ್ತರಿಗೆ ತಪ್ಪ ಸಂದೇಶಗಳನ್ನು ರವಾನಿಸುವ ಕಾರ್ಯವನ್ನು ಕೆಲ ದುಷ್ಟ ಶಕ್ತಿಗಳು ನಿರಂತವಾಗಿ ನಡೆಸಿವೆ. ಇಂಥ ನಿರುಪಯುಕ್ತ ಕಾರ್ಯಗಳತ್ತ ಗಮನ ಹರಿಸದಂತೆ ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.ಪಕ್ಷ ಸೇರ್ಪಡೆ: ಪರಸಪ್ಪ ಕರಡಿ, ದುರಗಪ್ಪ ತಾತಲ, ಕಂಠೆಪ್ಪ ಅಂಗಡಿ, ಶಿವನಗೌಡ ಪಾಟೀಲ, ಮಲ್ಲಪ್ಪ ನಾಯಕ, ಯಮನೂರಪ್ಪ ಧಮ್ಮೂರ, ಲಕ್ಷ್ಮಪ್ಪ ಜೂಲಗುಡ್ಡ, ಯಂಕಪ್ಪ ದಿವಾಣದ, ಮಲ್ಲಿಕಾರ್ಜುನ ಗೋನಾಳ, ಶರಣಪ್ಪ ತಳವಾರ, ಯಮನಪ್ಪ ಕುಂಕುಬಾವಿ, ಮುದುಕಪ್ಪ ಡೊಣ್ಣೆಗುಡ್ಡ ಸೇರಿದಂತೆ  ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅನೇಕ ಕಾರ್ಯಕರ್ತರು ಜೆಡಿಎಸ್‌ಗೆ ಅಧಿಕೃವಾಗಿ ಸೇರ್ಪಡೆಗೊಂಡರು.ಮುಖಂಡರಾದ ಅಮರೇಶ ಬೂದಿಹಾಳ, ಮಹಾದೇವಪ್ಪ ನವಲಗುಂದ, ನಾರಾಯಣಪ್ಪ ವಡ್ಡಟ್ಟಿ, ನಾಗಭೂಷಣ, ಡಾ.ಹೇಮಂತ, ಬಾಳು ಗುಳೇದ, ಮಂಜು ರಾಠೋಡ್, ದೊಡ್ಡಬಸಪ್ಪ ನವಲಗುಂದ, ಗುರುರಾಜ ಮಾಳೆಕಟ್ಟಿ, ಪ್ರಕಾಶ ಚಿಣಿ, ಯಮನಪ್ಪ ಕುಕನೂರ  ಉಪಸ್ಧಿತರಿದ್ದರು.ವಂಚನೆ: ಪ್ರಕರಣ ದಾಖಲುಶಿರಹಟ್ಟಿ: ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆದ ಆರೋಪದ ಮೇಲೆ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಹಾಲಿ ಸದಸ್ಯ ಶಿವನಗೌಡ ರಾಮನಗೌಡ ಪಾಟೀಲ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಕ್ಷ್ಮಣ ತಳವಾರ ವಿರುದ್ದ ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಶುಕ್ರವಾರ ಸ್ಥಳಿಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.2006-09 ನೇ ಸಾಲಿನ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವಿವಿಧ ವಸತಿ ಮತ್ತು ನಿವೇಶನ ಯೋಜನೆಗಳನ್ನು ಅನುಷ್ಟಾನ ಗೊಳಿಸುವಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಜೊತೆಗೆ ಸುಳ್ಳು ದಾಖಲೆಗಳನ್ನು ನೀಡಿ 7 ಮನೆಗಳ ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಳ್ಳದಿದ್ದರೂ ಸರ್ಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸಿ ಬ್ಯಾಂಕ್‌ಗಳ ಮೂಲಕ ಸರ್ಕಾರಕ್ಕೆ 2.35ಸಾವಿರ ರೂಗಳನ್ನು ವಂಚಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry