ಭಾನುವಾರ, ಮೇ 16, 2021
22 °C

`ಅಧಿಕಾರಸ್ಥರ ಮನ ಪರಿವರ್ತನೆಯಾಗಲಿ'

ಮಲ್ಲೇಶ್ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

ದಾವಣಗೆರೆ (ಮುದೇನೂರು ಸಂಗಣ್ಣ ವೇದಿಕೆ): ಅಧಿಕಾರದಲ್ಲಿರುವವರ ಹೃದಯ ಬದಲಾವಣೆಯಾಗದ ಹೊರತು ಸಮಾಜ ಬದಲಾವಣೆ ಅಸಾಧ್ಯ ಎಂದು ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.ಸಮ್ಮೇಳನದ ಅಂಗವಾಗಿ ನಡೆದ ಸಂವಾದ ಗೋಷ್ಠಿಯಲ್ಲಿ ಲೇಖಕ ದಾದಾಪೀರ್ ನವಿಲೇಹಾಳ್ ಅವರ' ಸಾಹಿತಿಗಳಿಗೆ ರಾಜಕೀಯ ಕೂಡದು ಎಂದರೆ, ಜಗದ್ಗುರುಗಳಿಗೇಕೆ? ಹಾಗಾದರೆ ಯಾವ ಬಗೆಯ ರಾಜಕೀಯ ತೀರ್ಮಾನಗಳನ್ನು ಸ್ವೀಕರಿಸಬೇಕು? ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಚುನಾವಣೆಗಳಲ್ಲಿ ಮಾತ್ರ  ಕ್ರಿಯಾಶೀಲತೆ ಪಡೆಯುವ ಹಳ್ಳಿಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು. ಯೋಗ್ಯರನ್ನು ಆಯ್ಕೆ ಮಾಡುವ ತೀರ್ಮಾನ ತೆಗೆದುಕೊಳ್ಳುವಂತಹ ಸಾಮರ್ಥ್ಯವನ್ನು ಗ್ರಾಮೀಣರು ಬೆಳೆಸಿಕೊಂಡರೆ  ಬದಲಾವಣೆ ನಿರೀಕ್ಷಿಸಬಹುದು ಎಂದರು.`ಬುದ್ದಿಜೀವಿಗಳೆನಿಸಿಕೊಂಡವರು ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದವರು; ಬದುಕಿನುದ್ದಕ್ಕೂ ಬಂಡಾಯ ಬೆಳೆಸಿಕೊಂಡವರು ಅಧಿಕಾರಕ್ಕಾಗಿ ತತ್ವ ಸಿದ್ಧಾಂತಗಳನ್ನು ಅಟ್ಟದ ಮೇಲಿಟ್ಟ ಬಗ್ಗೆ ನಿಮ್ಮ ನಿಲುವೇನು? ಎಂದು ಪತ್ರಕರ್ತ ಚಂದ್ರಹಾಸ ಹಿರೇಮಳಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇದಕ್ಕೆ ನನ್ನ ಸಹಮತವಿದೆ. ಅದು ವ್ಯಕ್ತಿಯ ವೈಯಕ್ತಿಕ ನೆಲೆಗಟ್ಟಿಗೆ ಸಂಬಂಧಿಸಿದ್ದು, ಅವರ ಕೃತಿಯನ್ನು ಪರಿಗಣಿಸಬೇಕಾಗುತ್ತದೆ. ವೈಯಕ್ತಿ ವಿಚಾರ ಪರಿಶೀಲನೆ ಬೇಡ ಎಂದರು.ಸದಭಿರುಚಿಯಿಲ್ಲದ ಕನ್ನಡ ಸಿನಿಮಾಗಳಿಗೆ ದಾರಿ ಯಾವುದು? ಎಂದು ಪ್ರೊ.ಭಿಕ್ಷಾವರ್ತಿ  ಮಠ ಪ್ರಶ್ನೆಗೆ,  ಬೇರು-ರೆಕ್ಕೆಗಳ ನಡುವಿನ ಜಿಜ್ಞಾಸೆಯಂತೆ ಈ ಸಮಸ್ಯೆ ಇದೆ. ನಾವೆಲ್ಲಾ `ಅಲೆಮಾರಿ'ತನವನ್ನು ಮೌಲ್ಯ ಎಂದು ಪರಿಗಣಿಸಿಕೊಂಡಿದ್ದೇವೆ. ಮಲೆನಾಡನ್ನು ದಾಟದೇ ವಿಶ್ವಬೆರಗು ಮೂಡಿಸಿದ ಸಾಹಿತ್ಯ ನೀಡಿದ ಕುವೆಂಪು ಅವರನ್ನು ನಾವು ಅನುಕರಿಸುವುದಿಲ್ಲ ಮತ್ತು ಅವರ ಬದುಕಿನತ್ತ ಆಲೋಚಿಸುವುದಿಲ್ಲ. ಬದುಕಿಗೆ ವೇಗ ಎಷ್ಟಿದೆ ಎಂದರೆ ನಮ್ಮ ಪಕ್ಕದಲ್ಲಿ ಓಡುತ್ತಿರುವವರ ಬಗ್ಗೆ ಸಹ ತಿರುಗಿ ನೋಡದಷ್ಟು ಸಹನೆ ಕಳೆದು ಕೊಂಡಿದ್ದೇದೆ. ಹಣ ಗಳಿಕೆ ಉದ್ದೇಶವಾದಾಗ, ಆರ್ಥಿಕ ವಿಪ್ಲವಗಳು ಸೃಷ್ಟಿ ಆದಾಗ ಬದುಕಿಗೆ ಗುರಿ ಇರುವುದಿಲ್ಲ. ಆಗ ಸಹಜವಾಗಿ ಸೃಜಶೀಲತೆಗೆ ಆದ್ಯತೆ ಕಡಿಮೆ.  ಬಂಡವಾಳ ವಷ್ಟೇ ಮುಖ್ಯ ವಾಗುತ್ತದೆ. ವ್ಯವಹಾರಿಕ ಹಿಡಿತದಿಂದ ಸಿನಿಮಾ ಹೊರ ಬಂದರಷ್ಟೇ ಸದಭಿರುಚಿ ಸಾಧ್ಯ ಎಂದರು.ಕನ್ನಡ ಶಾಲೆಗಳು ಸೊರಗಿವೆ. ಸರ್ಕಾರಿ ಸಂಬಳ ತಿನ್ನುವವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸದಿದ್ದರೆ ಮತ್ತ್ಯಾರು ಕಳುಹಿಸಬೇಕು? ಎಂದು ಪತ್ರಕರ್ತ ಆರಾಧ್ಯ ಅವರಿಗೆ ಉತ್ತರಿಸಿ, ಕಾನೂನಿನ ಮೂಲಕವೂ ಇದು ಅಸಾಧ್ಯ ಎಂದರು. ಡಾ.ನಾ. ಲೋಕೇಶ್, ಸುಮತೀಂದ್ರ ನಾಡಿಗ್, ಡಾ.ಉತ್ತಂಗಿ ಕೊಟ್ರೇಶ್, ಶಿವನಕೆರೆ ಬಸವಲಿಂಗಪ್ಪ, ಜಿ.ಎಸ್. ಸುಭಾಷ್ ಚಂದ್ರಭೋಸ್, ಚಿದಾನಂದ, ಕೊಂಡಜ್ಜಿ ಜಯಪ್ರಕಾಶ್, ಶಾಂತವೀರಯ್ಯ ಭಾಗವಹಿಸಿದ್ದರು. ಸಾಹಿತಿ ಮಲ್ಲಿಕಾರ್ಜು ಕಲಮರಹಳ್ಳಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.