ಗುರುವಾರ , ಜನವರಿ 23, 2020
21 °C

ಅಧಿಕಾರಿಗಳನ್ನು ಕೂಡಿಹಾಕಿ ಪ್ರತಿಭಟಿಸಿದ ಫುಟ್‌ಬಾಲ್ ಪ್ರೇಮಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಈಸ್ಟ್ ಬೆಂಗಾಲ್ ತಂಡವು ಸತತ ಎರಡನೇ ಪಂದ್ಯದಲ್ಲಿ ಸೋಲನುಭವಿಸಿದ್ದರ ಬಿಸಿಯು ಈ ಫುಲ್‌ಬಾಲ್ ಕ್ಲಬ್‌ನ ಅಧಿಕಾರಿಗಳಿಗೆ ತಟ್ಟಿತು. ಕೋಪಗೊಂಡ ಈಸ್ಟ್ ಬೆಂಗಾಲ್ ತಂಡದ ಅಭಿಮಾನಿಗಳು ಕ್ಲಬ್ ಅಧಿಕಾರಿಗಳನ್ನು ಸುಮಾರು ಅರ್ಧ ತಾಸು ಕೋಣೆಯಲ್ಲಿ ಕೂಡಿಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಸ್ಥಳೀಯ ಲೀಗ್‌ನ ಮೊದಲ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು 0-2ರಲ್ಲಿ ಮೋಹನ್ ಬಾಗನ್ ವಿರುದ್ಧ ಸೋಲನುಭವಿಸಿತ್ತು. ಆದರೆ ಆ ನಿರಾಸೆಯನ್ನು ಬೆಂಬಲಿಗರು ಹೇಗೋ ಸಹಿಸಿಕೊಂಡಿದ್ದರು. ಆದರೆ 1-4 ಗೋಲುಗಳಿಂದ ದುರ್ಬಲ ಆರ‌್ಯನ್ ಕ್ಲಬ್ ಎದುರು ಪರಾಭವಗೊಂಡಿದ್ದು ಭಾರಿ ಬೇಸರಕ್ಕೆ ಕಾರಣವಾಯಿತು.

 

ಪ್ರತಿಕ್ರಿಯಿಸಿ (+)