ಶನಿವಾರ, ಮೇ 28, 2022
31 °C

ಅಧಿಕಾರಿಗಳ ಗೈರು: ಗ್ರಾಮಸಭೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪರಿಶಿಷ್ಟ ಜಾತಿ. ವರ್ಗ, ಸಣ್ಣ ಹಾಗೂ ಅತಿಸಣ್ಣ ರೈತರು ಹಾಗೂ ಬಿಪಿಎಲ್ ಪಟ್ಟಿಯಲ್ಲಿ ಇರುವ ಬಡ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಕಲ್ಪಿಸಲು ತಾಲ್ಲೂಕಿನ ಅರಕೆರೆಯಲ್ಲಿ ನಿಗದಿಯಾಗಿದ್ದ ಗ್ರಾಮ ಸಭೆ ಅಧಿಕಾರಿಗಳು ಬಾರದ ಕಾರಣ ರದ್ದಾಗಿದೆ.ಅರಕೆರೆ ಗ್ರಾಮ ಮಂಚಾಯಿತಿ ಕಚೇರಿ ಬಳಿ ಗ್ರಾಮ ಸಭೆಗೆ ಸಿದ್ಧತೆ ನಡೆದಿತ್ತು. ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಸಭೆಗೆ ಆಗಮಿಸಿದ್ದರು. ಆದರೆ ಈ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಬಾರದೆ ಸಭೆ ರದ್ದುಗೊಂಡಿದೆ. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಲ್ಲ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ವಿಷಯ ಮುಟ್ಟಿಸಿದ್ದರೂ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಸಂಬಂಧಿಸಿದವರ ವಿರುದ್ಧ ಶೀಘ್ರ ಕ್ರಮ ಜರುಗಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್. ಮರೀಗೌಡ, ಜನರ ಬಳಿಗೆ ಆಡಳಿತ ಕಾರ್ಯಕ್ರಮದಲ್ಲಿ ಅರಕೆರೆ ಜಿ.ಪಂ. ಕ್ಷೇತ್ರದ ಎರಡು ಸಭೆಗಳಿಗೆ ಏಕೆ ಆಹ್ವಾನ ನೀಡಿಲ್ಲ? ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಅಮರನಾಥ್ ಅವರನ್ನು ಪ್ರಶ್ನಿಸಿದರು.ಅರಕೆರೆ ಗ್ರಾಮಸಭೆ ರದ್ದು ಗೊಂಡಿರುವ ಕಾರಣ ಸಂಬಂಧಿಸಿದ ಪಿಡಿಓ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಜನರ ಬಳಿಗೆ ಆಡಳಿತ ಕಾರ್ಯಕ್ರಮ ಶಾಸಕರ ಆದೇಶದ ಪ್ರಕಾರ ನಡೆದಿದೆ. ಅದರಲ್ಲಿ ನನ್ನ ಪಾತ್ರ ಇಲ್ಲ ಎಂದರು. ಜುಲೈ 11ರಂದು ಚಿಕ್ಕಂಕನಹಳ್ಳಿಯಲ್ಲಿ ನಡೆದ ಗ್ರಾಮಸಭೆಗೆ ಅಭಿವೃದ್ಧಿ ಅಧಿಕಾರಿ ನನಗೆ ಆಹ್ವಾನ ನೀಡಿಲ್ಲ. ಅವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.