ಅಧಿಕಾರಿಗಳ ನಿರುತ್ತರ

7

ಅಧಿಕಾರಿಗಳ ನಿರುತ್ತರ

Published:
Updated:

ಬೆಂಗಳೂರು:  ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡು ಭ್ರಷ್ಟಾಚಾರದ ನಿಗ್ರಹಕ್ಕೆ ಮುಂದಾಗಿರುವ ನಾಗರಿಕ ಸಂಘಟನೆಗಳ ಪ್ರಶ್ನೆಗಳಿಗೆ ಬಿಬಿಎಂಪಿ ಹಾಗೂ ಜಲಮಂಡಲಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೇ ನಾಗರಿಕರು ನಿರಾಶರಾದ ಬೆಳವಣಿಗೆ ಶನಿವಾರ ನಗರದಲ್ಲಿ ನಡೆಯಿತು. `ಈಶಾನ್ಯ ಬೆಂಗಳೂರಿನ ಕಲ್ಯಾಣ ಸಂಘಗಳ ಒಕ್ಕೂಟ~ ಎಂಬ ವೇದಿಕೆಯಡಿ 14 ಸಂಘಟನೆಗಳು ಮಾಹಿತಿ ಹಕ್ಕು ಕಾಯ್ದೆ-2005 ಅನುಷ್ಠಾನ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆಯ ಪ್ರಮುಖ ಅಧಿಕಾರಿಗಳು ಹಾಜರಾಗಿರಲಿಲ್ಲ.ಜಂಟಿ ಆಯುಕ್ತರು ಪಾಲಿಕೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.  ಆದರೆ ಒಕ್ಕೂಟದ ಪದಾಧಿಕಾರಿಗಳು, ಪೂರ್ವ ವಿಭಾಗದ ಡಿಸಿಪಿ ಚಂದ್ರಶೇಖರ್ ಮತ್ತು ಲೋಕಾಯುಕ್ತ ವಿಚಕ್ಷಣಾಧಿಕಾರಿ ಮುನಿಕೃಷ್ಣ ಪಾಲ್ಗೊಂಡರು.ಡಿಸಿಪಿ ಚಂದ್ರಶೇಖರ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಎಸ್.ಶಂಕರನ್, `ಮಾಹಿತಿ ಹಕ್ಕನ್ನು ಬಳಸಿಕೊಂಡು ಮಾಹಿತಿ ಬಯಸಿ ಅರ್ಜಿ ಹಾಕಿದರೆ,  ಅರ್ಜಿಯ ಲೋಪ ಹುಡುಕಲು ತೊಡಗುತ್ತಾರೆ~ ಎಂದು ವಿಷಾದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry