ಅಧಿಕಾರಿಗಳ ನಿರ್ಲಕ್ಷ: ಬಿಹಾರದ 23 ಮಕ್ಕಳು ಸಾವು

7

ಅಧಿಕಾರಿಗಳ ನಿರ್ಲಕ್ಷ: ಬಿಹಾರದ 23 ಮಕ್ಕಳು ಸಾವು

Published:
Updated:
ಅಧಿಕಾರಿಗಳ ನಿರ್ಲಕ್ಷ: ಬಿಹಾರದ 23 ಮಕ್ಕಳು ಸಾವು

ಪಟ್ನಾ (ಪಿಟಿಐ): ಬಿಹಾರದಲ್ಲಿ ವಿಷಪೂರಿತ ಆಹಾರ ಸೇವಿಸಿ 23 ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ `ಅಧಿಕಾರಿಗಳ ನಿರ್ಲಕ್ಷವೇ' ಈ ಘಟನೆಗೆ ಕಾರಣ ಎಂದು ತನಿಖಾ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.ಶೇಖರಿಸಿರುವ ಆಹಾರ ಪದಾರ್ಥಗಳು ಮತ್ತು ತಯಾರಿಸಿದ ಆಹಾರವನ್ನು ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷಿಸದೇ ಶಾಲಾ ಮಕ್ಕಳಿಗೆ ನೀಡಿದ್ದಾರೆ. ಇದರಿಂದ ಈ ದುರಂತ ಸಂಭವಿಸಿದೆ ಎಂದು ತನಿಖಾ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಅಲ್ಲದೇ, ಶೇಖರಿಸಿರುವ ಆಹಾರ ಪದಾರ್ಥಗಳ ಪರಿಶೀಲನೆ ಮತ್ತು ಆಹಾರವನ್ನು ಶುಚಿಯಾಗಿ ತಯಾರಿಸಬೇಕು ಎಂಬ ನಿಬಂಧನೆಗಳನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry