ಬುಧವಾರ, ನವೆಂಬರ್ 13, 2019
23 °C

ಅಧಿಕಾರಿಗಳ ಭರವಸೆ: ಮತದಾನ ಬಹಿಷ್ಕಾರ ಹಿಂದಕ್ಕೆ

Published:
Updated:

ಪಿರಿಯಾಪಟ್ಟಣ: ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸದ ತಾಲ್ಲೂಕು ಆಡಳಿತದ ಕ್ರಮ ವಿರೋಧಿಸಿ ಮತದಾನ ಬಹಿಷ್ಕಾರ ಘೋಷಿಸಿದ್ದ ಗ್ರಾಮಸ್ಥರನ್ನು ಅಧಿಕಾರಿಗಳು ಮನವೊಲಿಸಿದ ಘಟನೆ ಮಂಗಳವಾರ ನಡೆದಿದೆ.ಗ್ರಾಮದಲ್ಲಿ ಕಳೆದ 6 ವರ್ಷಗಳಿಂದ ಸಾರ್ವಜನಿಕ ರಸ್ತೆ ತೆರವುಗೊಳಿಸಿಕೊಡುವಂತೆ ಹಲವು ಅಧಿಕಾರಿಗಳಿಗೆ ದೊಡ್ಡಹರವೆ ಗ್ರಾಮದ 2ನೇ ಬ್ಲಾಕ್‌ನ ನಿವಾಸಿಗಳು ಮನವಿ ಮಾಡಿದ್ದರು. ಆದರೆ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಆಸಕ್ತಿ ತೋರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಈ ಬಾರಿ ವಿಧಾನಸಭೆ ಮತದಾನ ಬಹಿಷ್ಕರಿಸುವುದಾಗಿ ನಿವಾಸಿಗಳು ಕರಪತ್ರಗಳನ್ನು ಹೊರಡಿಸಿದ್ದರು. ತಕ್ಷಣ ಎಚ್ಚೆತ್ತ ತಾಲ್ಲೂಕು ಆಡಳಿತ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಸಂಧಾನ ಸಭೆ ನಡೆಸಿತು. ಉಪತಹಶೀಲ್ದಾರ್ ರವಿಶಂಕರ್ ಮಾತನಾಡಿ, ಚುನಾವಣೆ ಮುಗಿದ ಬಳಿಕ ಗ್ರಾಮಕ್ಕೆ ರಸ್ತೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಇದರಿಂದ ಸಮಾಧಾನಗೊಂಡ ಗ್ರಾಮಸ್ಥರು ಮತದಾನ ಮಾಡುವುದಾಗಿ ತಿಳಿಸಿದರು.ಆರ್‌ಐ ಶ್ರಿಧರ್‌ಮೂರ್ತಿ, ಎಎಸ್‌ಐ ಚಂದ್ರಶೇಖರ್, ಪಿಡಿಒ ಶಿವಯೋಗಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜು, ಗ್ರಾಮದ ಮುಖಂಡರಾದ ರಾಜು.ಡಿ.ಎಲ್. ಸ್ವಾಮಾಚಾರ್, ರಂಗಯ್ಯ, ಲಕ್ಷ್ಮೀಗೌಡ, ಶ್ರೀನಿವಾಸ್‌ಗೌಡ, ಜವರಪ್ಪ, ಕಾಳಯ್ಯ ಹಾಜರಿದ್ದರು.

ಪ್ರತಿಕ್ರಿಯಿಸಿ (+)