ಗುರುವಾರ , ಮೇ 6, 2021
23 °C

ಅಧಿಕಾರಿಗಳ ವಿರುದ್ಧ ಶಾಸಕ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಜನರಿಗೆ ಕುಡಿಯುವ ನೀರು ಒದಗಿಸಲು ಸಾಕಷ್ಟು ಹಣ ಇದ್ದರೂ ಅದನ್ನು ಸರಿಯಾಗಿ ಬಳಸದ ಅಧಿಕಾರಿಗಳನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ತರಾಟೆಗೆ ತೆಗೆದುಕೊಂಡರು.  ಬುಧವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಬಲ್ಲೇನಹಳ್ಳಿ ಗ್ರಾ.ಪಂ. ಪಿಡಿಒ ನಂಜುಂಡಯ್ಯ, ಜಿ.ಪಂ. ಎಇಇ ಹನುಮಂತಯ್ಯ ಇತರ ಅಧಿಕಾರಿಗಳ ವಿರುದ್ಧ ಅವರು ಅಸಹನೆ ವ್ಯಕ್ತಪಡಿಸಿದರು. ಚಂದಗಿರಿಕೊಪ್ಪಲು ಗ್ರಾಮದಲ್ಲಿ ಸತತ 4 ದಿನಗಳ ಕಾಲ ನೀರಿಲ್ಲದೆ ಜನರು ಬವಣೆ ಅನುಭವಿಸಿದ್ದಾರೆ. ಇರುವ ಹಣವನ್ನು ಬಳಸಿ ನೀರು ಕೊಡಲು ನಿಮ್ಮಿಂದ ಏಕೆ ಆಗಿಲ್ಲ? ಎಂದು ಪ್ರಶ್ನಿಸಿದರು.ಅಸಡ್ಡೆ ತೋರಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. 3 ಗಂಟೆಗೆ ಸಭೆ ಕರೆದರೆ 4 ಗಂಟೆಗೆ ಬಂದಿದ್ದೀರಾ? ಹೇಳೋರು ಕೇಳೋರು ಯಾರೂ ಇಲ್ಲ ಎಂದುಕೊಂಡಿದ್ದೀರಾ? ಎಂದು ಗದರಿದರು. ಕಿರಿಯ ಎಂಜಿಯರ್‌ಗಳನ್ನು ತಕ್ಷಣ ಸಭೆಗೆ ಕರೆಸಬೇಕು ಎಂದು ಜಿ.ಪಂ. ಎಇಇ ಹನುಮಂತಯ್ಯ ಅವರಿಗೆ ಕಟ್ಟಪ್ಪಣೆ ಮಾಡಿದರು.  ಗ್ರಾ.ಪಂ. ಪಿಡಿಓಗಳು, ಎಂಜಿಯರ್‌ಗಳು ತಮ್ಮ ಮೊಬೈಲ್‌ಗಳನ್ನು ಸದಾ ಚಾಲನೆಯಲ್ಲಿ ಇಟ್ಟಿರಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಕಡೆ ತಕ್ಷಣ ಧಾವಿಸಬೇಕು. ಬೋರ್‌ವೆಲ್ ಅಗತ್ಯವಿದ್ದರೆ ಕೊರೆಸಲು ಕೋರಿಕೆ ಸಲ್ಲಿಸಬೇಕು.

 

ಕೆಟ್ಟಿದ್ದರೆ ರಿಪೇರಿ ಮಾಡಿಸಬೇಕು ಎಂದು ಸೂಚಿಸಿದರು. ಕ್ಷೇತ್ರದ ಕೊತ್ತತ್ತಿ, ಯರಹಳ್ಳಿ, ಲಾಳನಕೆರೆ, ಮಾರಸಿಂಗನಹಳ್ಳಿ, ಕಾರಸವಾಡಿ, ಕ್ಯಾತುಂಗೆರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಿದ್ದು, ಪರಿಹರಿಸಬೇಕು. ಸಣ್ಣ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಳ್ಳಬೇಕು.ಹಣಕಾಸಿನ ಅಗತ್ಯವಿದ್ದರೆ ತಮ್ಮನ್ನು ಅಥವಾ ತಾ.ಪಂ. ಇಒ ಅವರನ್ನು ಸಂಪರ್ಕಿಸಬೇಕು ಎಂದು ಹೇಳಿದರು. ತಹಶೀಲ್ದಾರ್ ಅರುಳ್‌ಕುಮಾರ್, ತಾ.ಪಂ. ಇಓ ಕೆ.ವಿ.ಅಮರನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಾಲಕೃಷ್ಣ, ಶಕೀಲ್ ಅಹಮದ್, ಸಿಡಿಪಿಓ ಮಂಜುನಾಥ್, ಸೆಸ್ಕ್ ಎಇಇ ರಘು ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.