ಶುಕ್ರವಾರ, ನವೆಂಬರ್ 15, 2019
21 °C

ಅಧಿಕಾರಿ ಕಚೇರಿಯಲ್ಲಿ `ಬಿ ಫಾರಂ' ನಾಪತ್ತೆ

Published:
Updated:

ಗುಲ್ಬರ್ಗ:  ಗುಲ್ಬರ್ಗ ಉತ್ತರ ಮತಕ್ಷೇತ್ರಕ್ಕೆ ಕೆಜೆಪಿಯಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯ ಅಧಿಕೃತ ಬಿ ಫಾರಂ ಪ್ರತಿ ಜಾಗಕ್ಕೆ ನಕಲು ಪ್ರತಿ ಸೇರ್ಪಡೆಗೊಂಡಿದೆ ಎಂದು ನಾಮಪತ್ರ ಪರಿಶೀಲನೆ ದಿನವಾದ ಗುರುವಾರ ಅಭ್ಯರ್ಥಿಯೊಬ್ಬರು ದೂರಿದ್ದಾರೆ.`15ರಂದೇ ನಾಮಪತ್ರದೊಂದಿಗೆ ಅಧಿಕೃತ ಬಿ ಫಾರಂ ಸಲ್ಲಿಸಿ ಚೆಕ್‌ಲಿಸ್ಟ್ ಪಡೆದುಕೊಂಡಿದ್ದೇನೆ. 16ಕ್ಕೆ ಬೆಂಬಲಿಗರೊಂದಿಗೆ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದೇನೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ಕೆಲಸ ಮಾಡಿದ್ದು, ಅಸಲು ಪ್ರತಿ ಜಾಗಕ್ಕೆ ನಕಲು ಸೇರ್ಪಡೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಈ ಬಗ್ಗೆ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೇನೆ' ಎನ್ನುವುದು ಕೆಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ನಾಸೀರ್ ಹುಸೇನ ಉಸ್ತಾದ ಅವರು ವಿವರಿಸಿದ್ದಾರೆ.ಗುಲ್ಬರ್ಗ ಉತ್ತರ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಈಚೆಗೆ ಅಧಿಕಾರ ವಹಿಸಿಕೊಂಡ ಪಿ.ಎನ್. ರವೀಂದ್ರ, `ನಾಮಪತ್ರ ಸಲ್ಲಿಸುವಾಗ ಚೆಕ್‌ಲಿಸ್ಟ್ ನೀಡಲಾಗಿದೆ. ಆದರೆ ಗುರುವಾರ ಪರಿಶೀಲನೆ ನಡೆಸುವಾಗ ಬಿ ಫಾರಂ ನಕಲು ಪ್ರತಿ ಇರುವುದು ಗೊತ್ತಾಯಿತು. ಈ ಬಗ್ಗೆ ಶುಕ್ರವಾರ ಮಧ್ಯಾಹ್ನ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು' ಎಂದಿದ್ದಾರೆ. ಒಂದು ವೇಳೆ, ಚುನಾವಣಾ ಅಧಿಕಾರಿಗಳು ಬಿ ಫಾರಂ ನಕಲು ಎಂದು ನಿರ್ಧರಿಸಿದರೆ ನಾಸೀರ್ ಹುಸೇನ ಉಸ್ತಾದ ಪಕ್ಷೇತರ ಅಭ್ಯರ್ಥಿ ಎಂದು ಘೋಷಣೆ ನಡೆಯಲಿದೆ.

ಪ್ರತಿಕ್ರಿಯಿಸಿ (+)