ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

7

ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:

ಹುಮನಾಬಾದ್: ಬೌದ್ಧರ ಐತಿಹಾಸಿಕ ಸ್ಥಳ ಚಿತ್ತಾಪೂರ ತಾಲ್ಲೂಕಿನ ಸನ್ನತಿ ವೀಕ್ಷಿಸುವುದಕ್ಕೆ ಭೇಟಿ ನೀಡಲು ಹೋದ ಧಮ್ಮಭಂತೆ ಹಾಗೂ ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಮತ್ತಿತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಸೇಡಂ ಸಹಾಯಕ ಆಯುಕ್ತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ರಾಜ್ಯಪಾಲರ ಹೆಸರಿಗೆ ಬರೆದ ಮನವಿಪತ್ರ ಭಾರತೀಯ ಬೌದ್ಧ ಮಹಾಸಭಾ ಹಾಗೂ ಮತ್ತಿತರ ಸಂಘಟನೆಗಳ ಮುಖಂಡರು ಬುಧವಾರ ಹುಮನಾಬಾದ್ ತಹಸೀಲ್ದಾರ ಅವರಿಗೆ ಸಲ್ಲಿಸಿದರು.ಬೌದ್ಧಧಮ್ಮ ಪ್ರಚಾರಕರು ಮತ್ತು ಸಮಾಜ ಸೇವಕರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳುವ ಹುನ್ನಾರ ನಡೆಸಿದ್ದಾರೆ. ಈ ಮೂಲಕ ಅಂಬೇಡ್ಕರ ವಾದಿಗಳಿಗೆ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಮತ್ತು ಭಂತೆಜಿಯವರು ಮೂರ್ತಿ ಮಟ್ಟಿದ್ದರಿಂದ ಅಪವಿತ್ರವಾಗಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಜಾತಿನಿಂದನೆ ಕುರಿತು ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ರಾಜ್ಯಪಾಲರಿಗೆ ಹೆಸರಿಗೆ ಬರೆದ ಮನವಿಯಲ್ಲಿ ತಿಳಿಸಲಾಗಿದೆ.ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ತಿಳಿಸಿಲಾಗಿದೆ. ರಾಜ್ಯಪಾಲರ ಹೆಸರಿಗೆ ಬರೆದ ಮನವಿ–ಪತ್ರಕ್ಕೆ ಬಿ.ಎಸ್.ಐ ರಾಜ್ಯ ಕಾರ್ಯದರ್ಶಿ ಧರ್ಮರಾಯ ಘಾಂಗ್ರೆ, ತಾಲ್ಲೂಕು ಅಧ್ಯಕ್ಷ ಯೋಗೇಂದ್ರ ದೊಡ್ಡಿ, ಝೆರೆಪ್ಪ ಬೆಲ್ಲಾಳೆ, ದಸಂಸ(ಭೀಮವಾದ) ತಾಲ್ಲೂಕು ಸಂಚಾಲಕ ಮಾಣಿರಾವ ಬಿ.ಪವಾರ ಪ್ರಮುಖರಾದ ಸಂಜೀವಕುಮಾರ ಜಂಜೀರ, ದೇವೀಂದ್ರ ಪೋಲಾ, ತುಕಾರಾಮ ಭೋಸ್ಲೆ, ವೀರಪ್ಪ ಆರ್ಯ, ಶಂಕರ ಸಂಗಮ, ಸುದರ್ಶನ ಮಾಳಗೆ, ಸುರೇಶ ಘಾಂಗ್ರೆ, ಸಂಜೀವ ಕಾಟೆ, ಗೌತಮ ಮೇಟಿ, ರಮೇಶ ಘಾಂಗ್ರೆ, ವೀರಪ್ಪ ಧುಮ್ಮನಸೂರ, ಪುರಸಭೆ ಸದಸ್ಯ ವೀರಪ್ಪ ಆರ್ಯ ಮೊದಲಾದವರು ಸಹಿ ಹಾಕ್ದ್ದಿದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry