ಅಧಿಕಾರಿ ವಿರುದ್ಧ ಸದಸ್ಯರ ಆರೋಪ

7

ಅಧಿಕಾರಿ ವಿರುದ್ಧ ಸದಸ್ಯರ ಆರೋಪ

Published:
Updated:

ರೋಣ: ತಾಲ್ಲೂಕು ಪಂಚಾಯಿತಿ  ಸದಸ್ಯರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳು ಜನಸಾಮಾನ್ಯರಿಗೆ ಹೇಗೆ ಮಾಹಿತಿ ನೀಡಬಹುದು ಎಂದು ಇತ್ತೀಚೆಗೆ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಾ.ಪಂ. ಸದಸ್ಯ ಉಮೇಶ ಮಲ್ಲಾಪೂರ ಆರೋಪಿಸಿದರು.ತಾ.ಪಂ. ಎಂಜಿನಿಯರ್ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರತಿ ವಾರಕ್ಕೊಮೆ ತಾ.ಪಂ. ಕಾರ್ಯಾಲಯಕ್ಕೆ ಬರುವಂತೆ ಸೂಚಿಸಲಾಗುವುದೆಂದು ಎಂದು ತಿಳಿಸಿದರು.ತಾ.ಪಂ. ಅಧ್ಯಕ್ಷ ಶಿವಕುಮಾರ ಸಾಲಮನಿ ಮಾತನಾಡಿ ತಾಲ್ಲೂಕಿನ ಮಾರನಬಸರಿ, ಜಕ್ಕಲಿ, ಹಿರೇಹಾಳ, ಗ್ರಾಮಗಳಲ್ಲಿ ಡೆಂಗೆ ಪ್ರಕರಣ ಕಾಣಿಸಿಕೊಂಡಿದೆ. ಇದರ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ತಾಲ್ಲೂಕು ವೈದ್ಯಾಧಿಕಾರಿ ಭಜಂತ್ರಿ ಮಾತನಾಡಿ `ಗ್ರಾಮಗಳ ಸ್ಚಚ್ಛತೆ ಬಗ್ಗೆ ಗ್ರಾ.ಪಂ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೂಚಿಸಲಾಗಿದೆ. ಫಾಗಿಂಗ್ ವ್ಯವಸ್ಥೆಯಿಂದ ಚಿಕ್ಕ ಮಕ್ಕಳಲ್ಲಿ ತೊಂದರೆ ಕಾಣಿಸುತ್ತಿರುವುದರಿಂದ ಫಾಗಿಂಗ್ ವ್ಯವಸ್ಥೆ ಮಾಡಿಲ್ಲ, ಬದಲಾಗಿ ಜ್ವರ ಕಾಣಿಸಿಕೊಂಡ ಗ್ರಾಮಗಳಲ್ಲಿ 21ದಿನದ ಬಳಿಕ ಅಥವಾ ಸಂಸಯಾಸ್ಪದ ಡೆಂಗೆ ಪ್ರಕರಣದ ಗ್ರಾಮಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.ನರೇಗಲ್ ಪಟ್ಟಣದ ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ಎನ್. ಸಂಕನೂರ ಅವರನ್ನು ಸಭೆಯಿಂದ ಕಳುಹಿಸಿತು. ಗಿರೀಶ ಹೂಸೂರ ಹೊಳೆ ಆಲೂರಿನಲ್ಲಿ ಎ.ಎಚ್.ಒ.ಆಗಿ ಮತ್ತು ಗದಗ ಜಿಲ್ಲಾ ತೋಟಗಾರಿಕಾ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳಿಂದ ತಿಳಿದು ಬಂತು.ಕುಡಿಯುವ ನೀರಿನ ಸಮಸ್ಯೆ ಚರ್ಚಾ ಸಭೆ 10ರಂದು

ಲಕ್ಷ್ಮೇಶ್ವರ:
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ಮೇವುಂಡಿಯಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸುವ ಹಿನ್ನೆಲೆಯಲ್ಲಿ ಇದೇ 10ರಂದು ಬೆಳಿಗ್ಗೆ 11ಕ್ಕೆ ಪುರಸಭೆ  ಸಭಾಭವನದಲ್ಲಿ ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ ಇವರ ಅಧ್ಯಕ್ಷತೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ.ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಪುರಸಭೆ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry