ಶನಿವಾರ, ಏಪ್ರಿಲ್ 17, 2021
31 °C

ಅಧಿಕಾರ ತಾತ್ಕಾಲಿಕ, ಶಿಕ್ಷಣ ಶಾಶ್ವತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಜೀವನದಲ್ಲಿ ಹಣ, ಅಧಿಕಾರ  ತಾತ್ಕಾಲಿಕ, ಉಜ್ವಲ ಭವಿಷ್ಯ ರೂಪಿಸುವ ಮಕ್ಕಳಿಗೆ ನೀಡುವ ಶಿಕ್ಷಣ   ಶಾಶ್ವತ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಅಭಿಪ್ರಾಯಪಟ್ಟರು.ಪಟ್ಟಣದ ಆಲ್-ಅಮೀನ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಶಿಷ್ಯವೇತನ ಸಾಂಕೇತಿಕ ವಿತರಿಸಿ, ಮಾತನಾಡಿದರು.ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರ ಈ ಶಿಷ್ಯವೇತನ ನೀಡುತ್ತಿದ್ದು, ಅರ್ಹರು ಯೋಜನೆಯ ಲಾಭಪಡೆದು ಉನ್ನತ ಹುದ್ದೆ ಜೊತೆಗೆ, ಸ್ಥಾನಮಾನ ಗಿಟ್ಟಿಸಿಕೊಳ್ಳಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.ಯೋಜನೆ ಕುರಿತು ಪಾಲಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದರು.ಆಲ್-ಅಮೀನ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಎಂ.ಡಿ.ಇಕ್ರಾಮುದ್ದೀನ್ ಮಾತನಾಡಿದರು.  ಬಿ.ಇ.ಒ ಕುಮಾರಸ್ವಾಮಿ, ಬಿ.ಆರ್.ಸಿ ಅಧಿಕಾರಿ ಓಂಕಾರ ರೂಗನ್, ಪುರಸಭೆ ಸದಸ್ಯ ವಿನಾಯಕ ಯಾದವ್ ಮೊದಲಾದವರು ಇದ್ದರು. ಸಂಸ್ಥೆಯ ಅಧ್ಯಕ್ಷ ಮಹ್ಮದ್ ಅಪ್ಸರಮಿಯ್ಯ ವಂದಿಸಿದರು. ಸೈಯೀದ್ ಬಾಖರ್ ಬೈರ್ ನಿರೂಪಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.