ಅಧಿಕಾರ ದಾಹದ ಕಲುಷಿತ ರಾಜಕೀಯ ಅಳಿಯಲಿ

7

ಅಧಿಕಾರ ದಾಹದ ಕಲುಷಿತ ರಾಜಕೀಯ ಅಳಿಯಲಿ

Published:
Updated:

ಶಿರಸಿ: ಅಧಿಕಾರ ದಾಹದ ಇಂದಿನ  ಕಲುಷಿತ ಸಂದರ್ಭದಲ್ಲಿ ಸಜ್ಜನ ಶಕ್ತಿ ಜಾಗೃತವಾಗಬೇಕು ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಸಂತೋಷ ಹೇಳಿದರು.ಅವರು ನಗರದ ಟಿಎಂಎಸ್ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಂಡಿತ ದೀನದಯಾಳ ಉಪಾ ಧ್ಯಾಯ ಸಮರ್ಪಣಾ ದಿನದ ಕಾರ್ಯ ಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.`ಪಂಡಿತ ದೀನದಯಾಳರ ಸರ್ವ ಶ್ರೇಷ್ಠ ಕಾರ್ಯ ಪದ್ಧತಿ ನಮಗೆಲ್ಲ ಮಾದರಿಯಾಗಬೇಕು. ಏಕಾತ್ಮ ಮಾನ ವತಾವಾದ, ಕಾರ್ಯಪದ್ಧತಿ ಹಾಗೂ ಕಲುಷಿತ ವಾತಾವರಣದಲ್ಲಿ ಕಾರ್ಯ ದಕ್ಷತೆ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಏರಿಸಬಲ್ಲವು ಎಂದರು.ಅಭಿವೃದ್ಧಿ ಯೋಜನೆ ಉಳ್ಳವರಿಗೆ ಮಾತ್ರ ಸೀಮಿತವಾಗಿದೆ. ಇರುವ ಸಂಪ ನ್ಮೂಲ ಕಳೆದು ಇನ್ನಿತರರಿಗೆ ನೀಡು ವುದು ಅಭಿವೃದ್ಧಿ ಅಲ್ಲ. ಸಮಾಜದ ಕೊನೆಯ ವ್ಯಕ್ತಿಗೆ ಯಾವ ಯೋಜನೆ ಅನುಕೂಲವಾಗುತ್ತದೆಯೋ ಅದೇ ನಿಜವಾದ ಅಭಿವೃದ್ಧಿ ಎಂದು ದೀನ ದಯಾಳರು ಪ್ರತಿಪಾದಿಸಿದ್ದಾರೆ ಎಂದರು.ವಿಷಮ ಪರಿಸ್ಥಿತಿಯಲ್ಲಿ ಕಾರ್ಯ ಕರ್ತ ಹೇಗೆ ಶುದ್ಧತೆಯಿಂದ ಸಾಮಾ ಜಿಕ ಹೊಣೆಗಾರಿಕೆ ನಿಭಾಯಿಸಬೇಕು ಎನ್ನುವ ಸಂದೇಶವನ್ನು ದೀನದಯಾಳ ಉಪಾಧ್ಯಾಯರು ನೀಡಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆ ಪಕ್ಷದ ಕಾರ್ಯಕರ್ತರಿಗೆ ಗೊಂದಲ ಉಂಟುಮಾಡುತ್ತಿದೆ. ರಾಜಕೀಯ ಜೂಜಾಟದಂತೆ ಆಗಿದೆ ಎಂದು ಅವರು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಶಿರಸಿ ಗ್ರಾಮಾಂತರ ಕ್ಷೇತ್ರಾಧ್ಯಕ್ಷ ಎಂ.ವಿ. ಭಟ್ಟ, ನಗರ ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯ್ಕ, ಗೇರು ನಿಗಮದ ಅಧ್ಯಕ್ಷ ವಿನೋದ ಪ್ರಭು, ನಗರಸಭೆ ಅಧ್ಯಕ್ಷ ರವಿ ಚಂದಾವರ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry