ಗುರುವಾರ , ಜೂನ್ 24, 2021
27 °C

ಅಧಿಕ ಅಂತರದ ಗೆಲುವು: ಹೆಗ್ಡೆ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕ ಅಂತರದ ಗೆಲುವು: ಹೆಗ್ಡೆ ವಿಶ್ವಾಸ

ತರೀಕೆರೆ: ಕ್ಷೇತ್ರದ ಎಲ್ಲಡೆ ಪ್ರಚಾರ ಕೈಗೊಂಡಿರುವುದರಿಂದ ಪಕ್ಷದ ಬಗ್ಗೆ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಚುನಾವಣೆಯನ್ನು ಅಧಿಕ ಅಂತರದಿಂದ ಗೆಲ್ಲುವುದಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದರು.ತಾಲ್ಲೂಕು ಕಾಂಗ್ರೆಸ್ ಘಟಕ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ರೋಡ್ ಶೋದಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ಬಾರಿ ಅಲ್ಪಮತದ ಅಂತರದಿಂದ ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಹಲವು ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗಿದೆ. ಕಡೂರು-ಚಿಕ್ಕಮಗಳೂರು ರೈಲ್ವೆ ಮಾರ್ಗಕ್ಕೆ ಹೆಚ್ಚಿನ ಅನುದಾನ, ಅಡಿಕೆ ಬೆಳೆಗೆ ರೂ. 1 ಕೋಟಿ ವಿಶೇಷ ಪ್ಯಾಕೇಜ್, ತೆಂಗು ಅಭಿವೃದ್ಧಿಗೆ ಕ್ರಮ, ತರೀಕೆರೆ ವಿಜ್ಞಾನ್ ಇಂಡಸ್ಟ್ರೀಸ್ ಕಾರ್ಮಿಕರ ಸಮಸ್ಯೆಗೆ ಸೂಕ್ತ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಜೆಡಿಎಸ್-ಬಿಜೆಪಿ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ ಎಂದರು.ಪಟ್ಟಣದ ಕೋಡಿಕ್ಯಾಂಪ್‌ನಿಂದ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮಹಾತ್ಮಾಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಿತು. ಕಾಂಗ್ರೆಸ್‌ಮುಖಂಡರಾದ ನೀಲಕಂಠಪ್ಪ, ಎಸ್.ಎಂ.ನಾಗರಾಜ್, ಟಿ.ಎಚ್.ಶಿವಶಂಕರಪ್ಪ, ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ, ಡಾ.ಮರರುಳಸಿದ್ದಪ್ಪ, ಮುಖಂಡರಾದ ಎಚ್.ಓಂಕಾರಪ್ಪ, ಪರಮೇಶ್, ಕೆ.ಆರ್.ದ್ರುವಕುಮಾರ್, ಆರ್.ಮಂಜುನಾಥ್, ಜಿ.ಎಚ್.ಶ್ರೀನಿವಾಸ್, ಫಾರೂಕ್, ಅಬ್ದಲ್‌ಘನಿ ಅನ್ವರ್, ಧರ್ಮರಾಜ್, ಪ್ರಕಾಶ್ ಮತ್ತು ಮಿಲ್ಟ್ರಿ–ಶ್ರೀನಿವಾಸ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.