ಅಧಿಕ ಇಳುವರಿ: ಅಳವಡಿಸಿ ಹನಿ ನೀರಾವರಿ!

7

ಅಧಿಕ ಇಳುವರಿ: ಅಳವಡಿಸಿ ಹನಿ ನೀರಾವರಿ!

Published:
Updated:

ಮೈಸೂರು: `ಮಂಡಿಯುದ್ದ ಕಬ್ಬು ಬೆಳೆಯುವ ಹೊತ್ತಿಗೆ ಎದೆಮಟ್ಟ ಸಾಲ~ ಎಂಬುದು ಕಬ್ಬು ಬೆಳೆಗಾರರ ಬಗ್ಗೆ ಚಾಲ್ತಿಯಲ್ಲಿರುವ ಗಾದೆ!

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ಎಸ್‌ಎಪಿ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿ ಸುವ ಜೊತೆಗೆ ಆರ್ಥಿಕವಾಗಿ ಸಬಲರಾಗಲು `ಹನಿ ನೀರಾವರಿ~ ಸೇರಿದಂತೆ ಬೇರೆ ಬೇರೆ ವಿಧಾನಗಳನ್ನು ಅಳವಡಿಸಿಕೊಳ್ಳಲು ರೈತರು ಮುಂದಾ ಗುವುದು ಸೂಕ್ತ ಎಂಬುದು ಕೃಷಿ ತಜ್ಞರ ಅಭಿಮತ.

ಕಬ್ಬು ಬೆಳೆಗೆ ವರ್ಷವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು ಎಂಬುದು ಬಹುತೇಕ ರೈತರ ನಂಬಿಕೆ. ಆದರೆ, ತಂತ್ರಜ್ಞಾನದ ಫಲವಾಗಿ ಇಂದು ಕಬ್ಬಿನ ಬೆಳೆಗೂ `ಹನಿ ನೀರಾವರಿ~ ಪದ್ಧತಿ ಅಳವಡಿಸುವುದು ಸಾಧ್ಯ ವಾಗಿದೆ. `ಸಬ್ ಸರ್ಫೇಸ್~ (ಮಣ್ಣಿನೊಳಗೆ ನೀರಿನ ಪೈಪ್ ಅಳವಡಿಸುವುದು) ಎಂಬ ಹನಿ ನೀರಾವರಿ ತಂತ್ರಜ್ಞಾನದಿಂದ ಬಿರು ಬೇಸಿಗೆಯಲ್ಲೂ ಕಬ್ಬಿಗೆ ನೀರುಣಿಸಬ ಹುದಾಗಿದೆ. ನೀರು ಮತ್ತು ವಿದ್ಯುತ್ ಸಮಸ್ಯೆ ಇರುವೆಡೆ `ಸಬ್ ಸರ್ಫೇಸ್~ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಲ್ಲಿ ಶೇ 25ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ.

ಅಂತರ ಬೆಳೆ ಪದ್ಧತಿ: ಕಬ್ಬಿನ ಬೆಳೆ ಯಿಂದ ಸಾಕಷ್ಟು ಲಾಭ ಬರುತ್ತಿಲ್ಲ, ವರ್ಷದಿಂದ ವರ್ಷಕ್ಕೆ ಉತ್ಪಾದನಾ ವೆಚ್ಚ ಹೊರೆಯಾಗುತ್ತಿದೆ ಎಂದು ಕೊರ ಗುವ ಬದಲು ಕೊಂಚ ಆಸಕ್ತಿಯಿಂದ `ಅಂತರ ಬೆಳೆ ಪದ್ಧತಿ~ ಅಳವಡಿಸಿ ಕೊಂಡಲ್ಲಿ ನೆಮ್ಮದಿಯಾಗಿರಬಹುದು.

ಈ ಪದ್ಧತಿಯಲ್ಲಿ 20 ಸಾಲು ಕಬ್ಬಿನ ಬೆಳೆಯ ಪಕ್ಕ ಆರು ಅಡಿ ಜಾಗ ಖಾಲಿ ಬಿಡಬೇಕು. ಆ ಜಾಗದಲ್ಲಿ ಲಾಭದಾ ಯಕ ಬೆಳೆಗಳಾದ ಟೊಮೆಟೊ, ಬೀನ್ಸ್, ಸೋಯಾ ಅವರೆ, ಅಲಸಂದೆ, ಹೆಸರು, ಉದ್ದು, ದ್ವಿದಳ ಧಾನ್ಯಗಳನ್ನು ಬೆಳೆಯಬಹುದು. ಹೀಗೆ ಮಾಡುವು ದರಿಂದ ಕಬ್ಬಿನ ಆದಾಯ ಹೊರತು ಪಡಿಸಿ, ವರ್ಷವಿಡೀ ಮನೆಯ ಖರ್ಚಿಗೆ ಹಣ ಪಡೆಯಬಹುದು. ದ್ವಿದಳ ಧಾನ್ಯಗಳಿಗೆ ಉತ್ತಮ ಬೆಲೆ ಇರುವುದರಿಂದ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.

ಮಂಡ್ಯ ಜಿಲ್ಲೆಯ ಸುಮಾರು 800 ಎಕರೆ ಪ್ರದೇಶದಲ್ಲಿ ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ನೆಮ್ಮದಿಯ ಬದುಕು ಕಂಡುಕೊಂಡಿ ದ್ದಾರೆ. ಕಬ್ಬಿನ ನಡುವೆ ಸಾಕಷ್ಟು ಅಂತರ ಇರುವುದರಿಂದ ಕಬ್ಬು ಕಟಾವು ಮಾಡಲೂ ಸುಲಭವಾಗುತ್ತದೆ. ಇತ್ತೀಚೆಗಷ್ಟೇ `ಜಾನ್ ಡಿಯರ್~ ಕಂಪೆನಿ ಬೃಹತ್ ಕಬ್ಬು ಕಟಾವು ಯಂತ ಕಂಡು ಹಿಡಿದಿದ್ದು, ಅಂತರ ಬೆಳೆ ಪದ್ಧತಿ ಅಳವಡಿಸಿ ಕೊಂಡಿರುವ ರೈತರಿಗೆ ಇದು ವರದಾನ ವಾಗಿದೆ. ಕೇವಲ ಒಂದು ಗಂಟೆಯಲ್ಲಿ ಅರ್ಧ ಎಕರೆ ಕಬ್ಬನ್ನು ಕಟಾವು ಮಾಡುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ.

`ರೈತರು ಇಡೀ ಜಮೀನಿನಲ್ಲಿ ಕಬ್ಬು ಬೆಳೆಯುವ ಬದಲು ಮೂರು ಅಥವಾ ನಾಲ್ಕು ಎಕರೆಯಲ್ಲಿ ಕಬ್ಬು ಬೆಳೆದು (ಶೇ 75) ಇನ್ನುಳಿದ ಜಾಗದಲ್ಲಿ (ಶೇ 25) ತರಕಾರಿ ಬೆಳೆಯಬಹುದು. ಟೊಮೆಟೊ, ಬದನೆಕಾಯಿ, ಕೊತ್ತಂಬರಿ ಸೊಪ್ಪು, ಅವರೆ, ಬೀನ್ಸ್, ಬೀಟ್‌ರೂಟ್‌ಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುವುದರಿಂದ ಅಧಿಕ ಲಾಭ ಗಳಿಸಬಹುದು. ಅಲ್ಲದೆ, ದಿನನಿತ್ಯದ ಖರ್ಚುಗಳನ್ನೂ ನಿಭಾಯಿಸ ಬಹುದು. ಇದರಿಂದ ಮಣ್ಣಿನ ಫಲವತ್ತೆಯನ್ನೂ ಹೆಚ್ಚಿಸಬಹುದು~ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry