ಅಧಿಕ ಟ್ವೆಂಟಿ-20 ಪಂದ್ಯ; ಸಿಎ ಚಿಂತನೆ

7

ಅಧಿಕ ಟ್ವೆಂಟಿ-20 ಪಂದ್ಯ; ಸಿಎ ಚಿಂತನೆ

Published:
Updated:

ಸಿಡ್ನಿ (ಪಿಟಿಐ): ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಏಕದಿನ ಪಂದ್ಯಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಟ್ವೆಂಟಿ-20 ಪಂದ್ಯಗಳನ್ನು ನಡೆಸಲು ಚಿಂತನೆ ನಡೆಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟ್ವೆಂಟಿ-20 ಪಂದ್ಯ ವೀಕ್ಷಿಸಲು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದು ಇದಕ್ಕೆ ಕಾರಣ.ಎಎನ್‌ಜೆಡ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯ ವೀಕ್ಷಿಸಲು 59,659 ಮಂದಿ ಆಗಮಿಸಿದ್ದರು. ಇದು 84 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿತ್ತು. ಇಂಗ್ಲೆಂಡ್ ವಿರುದ್ಧ ಎಸ್‌ಸಿಜಿಯಲ್ಲಿ 1928 ರಲ್ಲಿ ನಡೆದ ಪಂದ್ಯವೊಂದನ್ನು ವೀಕ್ಷಿಸಲು 58, 446 ಮಂದಿ ನೆರೆದಿದ್ದರು. ಟ್ವೆಂಟಿ-20 ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಅಧಿಕ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry