ಅಧಿಕ ಭಾರದ ಲಾರಿಗಳಿಗೆ ದಂಡ ವಿಧಿಸಲು ಒತ್ತಾಯ

ಸೋಮವಾರ, ಜೂಲೈ 22, 2019
27 °C

ಅಧಿಕ ಭಾರದ ಲಾರಿಗಳಿಗೆ ದಂಡ ವಿಧಿಸಲು ಒತ್ತಾಯ

Published:
Updated:

ಬೆಂಗಳೂರು: `ಕೆಲ ಲಾರಿ ಮಾಲೀಕರಿಂದ ಅಧಿಕಾರಿಗಳು ಲಂಚ ಪಡೆದು, ನಿಗದಿತ ಪ್ರಮಾಣಕ್ಕಿಂತ ಅಧಿಕ ಭಾರದ ವಸ್ತುಗಳನ್ನು ಸಾಗಿಸಲು ಅನುಮತಿ ನೀಡುತ್ತಿರುವುದರಿಂದ ಇತರ ಲಾರಿಗಳು ಕೆಲಸವಿಲ್ಲದೇ ನಿಲ್ಲಬೇಕಾಗಿದ್ದು, ಅಧಿಕ ಭಾರದಿಂದ ರಸ್ತೆಗಳೂ ಹಾಳಾಗುತ್ತಿವೆ~ ಎಂದು ಕರ್ನಾಟಕ ಲಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.`ನಿಗದಿತ ಭಾರಕ್ಕಿಂತ ಅಧಿಕ ಭಾರ ಹೊತ್ತೊಯ್ಯುತ್ತಿರುವ ಲಾರಿಗಳನ್ನು ವಶಕ್ಕೆ ಪಡೆಯುವ ಕ್ರಮಗಳು ಗುಜರಾತ್, ಕೇರಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಜಾರಿಯಲ್ಲಿವೆ. ಕರ್ನಾಟಕದಲ್ಲಿ ಈ ಪದ್ಧತಿ ಇಲ್ಲ. ಈಗಲಾದರೂ ಅಧಿಕಾರಿಗಳು ಅಧಿಕ ಭಾರದ ಲಾರಿಗಳನ್ನು ಪತ್ತೆಹಚ್ಚಿ ದಂಡ ವಿಧಿಸಬೇಕು~ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry