ಅಧಿಕ ಭಾರ ಸಾಗಣೆ: ಮೂರು ಲಾರಿ ವಶ

7

ಅಧಿಕ ಭಾರ ಸಾಗಣೆ: ಮೂರು ಲಾರಿ ವಶ

Published:
Updated:

ಬಾಳೆಹೊನ್ನೂರು: ನಿಗದಿಗಿಂತ ಅಧಿಕ ಭಾರ ಹೊತ್ತ ಮೂರು ಲಾರಿಗಳನ್ನು ಪೊಲೀಸರು ಶನಿವಾರ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ಜಿಲ್ಲಾಡಳಿತ ಗ್ರಾಮೀಣ ಭಾಗದ ರಸ್ತೆಗಳಲ್ಲಿ 15 ಟನ್‌ಗಿಂತ ಅಧಿಕ ಭಾರ ಹೊತ್ತ ವಾಹನಗಳನ್ನು ನಿಷೇಧಿಸಿದೆ. ಆದರೆ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಲಾರಿ ಗಳನ್ನು ವಶಪಡಿಸಿ ಕೊಳ್ಳಲಾಗಿದೆ.ಜಿಲ್ಲೆಯ ಎರಡು ಭಾಗದಲ್ಲಿ ಮಾತ್ರ ಭಾರಿ ಭಾರ ಹೊತ್ತ ಲಾರಿಗಳ ಓಡಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ ಅಂಶ ತಡವಾಗಿ ಬೆಳಕಿಗೆ ಬಂದಿದೆ.ಜಿಲ್ಲಾಧಿಕಾರಿ ನಿಲಯ್ ಮಿತಾಶ್ 2006 ರ ಡಿ. 2  ರಂದು ಅದೇಶ ಹೊರಡಿಸಿರುವ ಆದೇಶ ದನ್ವಯ ಶಿವಮೊಗ್ಗ ಜಿಲ್ಲೆಯ ಕಡೆಯಿಂದ ಬರುವ ಭಾರೀ ಭಾರದ ಸರಕು ಸಾಗಾಟ ವಾಹನಗಳು ಮುತ್ತಿನಕೊಪ್ಪ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ಕೆರೆಕಟ್ಟೆ ಮಾರ್ಗವಾಗಿ ಮಂಗಳೂರಿಗೆ ತೆರಳಬಹುದಾಗಿದೆ.ಚಿತ್ರದುರ್ಗ, ದಾವಣಗೆರೆ ಕಡೆಯಿಂದ ಬರುವ ವಾಹನಗಳು ಅಜ್ಜಂಪುರ, ಬೀರೂರು, ಕಡೂರು, ಮೂಡಿಗೆರೆ,  ೊಟ್ಟಿಗೆಹಾರ ಮೂಲಕ ಮಂಗಳೂರಿಗೆ ತೆರಳಲು ನಿರ್ದೇಶಿಸಲಾಗಿದೆ. ಉಳಿದಂತೆ ಜಿಲ್ಲೆಯ ಎಲ್ಲಾ ಭಾಗದಲ್ಲೂ ಅಧಿಕ ಭಾರ ಹೊತ್ತ ಲಾರಿಗಳ ಸಂಚಾರ ನಿಷೇಧಿಸಿ ಆದೇಶ ನೀಡಲಾಗಿದೆ,ಈ ನಿಟ್ಟಿನಲ್ಲಿ ಮಲೆನಾಡು ಭಾಗದಲ್ಲಿ 15 ಟನ್‌ಗೂ ಹೆಚ್ಚು ಭಾರ ಹೊತ್ತ ಟಿಂಬರ್ ಲಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಚಿಂತಿಸಿರುವುದಾಗಿ ಠಾಣಾಧಿಕಾರಿ ಬಿ.ಎಸ್.ಮಂಜುನಾಥ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry