ಮಂಗಳವಾರ, ಜನವರಿ 28, 2020
24 °C

ಅಧ್ಯಕ್ಷರಾಗಿ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಪಟ್ಟಣದ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್  ಆಡಳಿತ ಮಂಡಳಿ ರದ್ದತಿಗೆ ನ್ಯಾಯಾಲಯ­ದಲ್ಲಿ ತಡೆ ಆಜ್ಞೆ ದೊರಕಿದ್ದರಿಂದ ಅದರ ಅಧ್ಯಕ್ಷರಾಗಿ ಎಚ್.ಎ.­ನಟರಾಜ್ ಮುಂದುವರೆದಿದ್ದಾರೆ.ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರುಗಳಾದ ಎಸ್‌.­ಅರುಣ್ ಕುಮಾರ್, ಎಸ್.ಶ್ರೀನಿವಾಸ್, ಮಾಲತಿ, ಆರ್.ಸೋಮ­ಸುಂದರ್, ಪಿ.ಚೌಡಪ್ಪ ಹಾಗು ಪಿ.ಎಸ್.­ಮಂಜು­ನಾಥ್ ಅವರು ಬ್ಯಾಂಕಿನ ಹಿತಾಸಕ್ತಿಗೆ ಬಾಧಕ­ವಾಗುವಂತೆ ಕಾರ್ಯನಿರ್ವಹಿ­ಸುತ್ತಿ­ದ್ದಾರೆ ಎಂದು ಬಂದ ದೂರಿನ ಅನ್ವಯ ದೊಡ್ಡಬಳ್ಳಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹ­ಗೊಳಿಸಿ ನ.25 ರಂದು ಆದೇಶ ನೀಡಿದ್ದರು.ಆಡಳಿತ ಮಂಡಳಿ ಸ್ಥಾನದಲ್ಲಿ ನೆಲಮಂಗಲ ತಾಲ್ಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಪಿ.ಮುನಿರಾಜ ಅವರನ್ನು ಬ್ಯಾಂಕಿನ ವಿಶೇಷ ಅಧಿಕಾರಿಯನ್ನಾಗಿ 6 ತಿಂಗಳ ಕಾಲ ಕಾರ್ಯ ನಿರ್ವಹಿಸಲು ಸಹಾಯಕ ನಿಬಂಧಕರು ಸೂಚನೆ ನೀಡಿದ್ದರು. ಹೀಗಾಗಿ ಬ್ಯಾಂಕಿನ ಅಧ್ಯಕ್ಷರಾದ ಎಚ್.ಎ.ನಟರಾಜ್ ಅಧಿಕಾರದಿಂದ ವಂಚಿತರಾಗಿದ್ದರು.ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶ ಪ್ರಶ್ನಿಸಿ ಅನರ್ಹ­ಗೊಂಡ ನಿರ್ದೇಶಕರು ಹೈಕೋರ್ಟ್  ಅರ್ಜಿ ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ನ್ಯಾಯಾಲಯ ಆದೇಶಕ್ಕೆ ತಡೆ ಆಜ್ಞೆ ನೀಡಿತು.ಬ್ಯಾಂಕ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಇದನ್ನು ಸಹಿಸದ ಕೆಲವರು ರಾಜಕೀಯ ದುರದ್ದೇಶ­ದಿಂದ ಪಿತೂರಿ ನಡೆಸಿದರು.ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸುವತ್ತ ಕಾರ್ಯ­ಕ್ರಮ ಹಮ್ಮಿಕೊಳ್ಳುವುದಾಗಿ ಅಧ್ಯಕ್ಷ ಎಚ್.ಎ.ನಟರಾಜ್ ಸುದ್ದಿಗಾರ­ರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)