ಅಧ್ಯಕ್ಷರಾಗಿ ರಕ್ಷೀತಾ ಸಾಹೆಬ್‌ಗೌಡ ಆಯ್ಕೆ

7
ವಾಡಿ ಪುರಸಭೆ ಸ್ಥಾಯಿ ಸಮಿತಿ ಕಾಂಗ್ರೆಸ್‌ ವಶಕ್ಕೆ

ಅಧ್ಯಕ್ಷರಾಗಿ ರಕ್ಷೀತಾ ಸಾಹೆಬ್‌ಗೌಡ ಆಯ್ಕೆ

Published:
Updated:

ವಾಡಿ: ಪಟ್ಟಣದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಕ್ಷೀತಾ ಸಾಹೆಬ್‌ಗೌಡ ಆಯ್ಕೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಸೋಮವಾರ ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ್‌ ನಡೆಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ರಕ್ಷೀತಾ ಸಾಹೆಬ್‌ಗೌಡ ಮತ್ತು ಬಿಜೆಪಿಯಿಂದ ಭಾಗವತ್‌ ಸುಳೆ ಅವರು ನಾಮ ಪತ್ರ ಸಲ್ಲಿಸಿದ್ದರು.  ’ಬಿಜೆಪಿಗೆ ಬಹುಮತ ಇಲ್ಲ. ಕಾಂಗ್ರೆಸ್‌ ಅಭ್ಯರ್ಥಿ ರಕ್ಷೀತಾ ಸಾಹೆಬ್‌ಗೌಡರ ಪರ ಕಾಂಗ್ರೆಸ್‌ ಸದಸ್ಯರು ಕೈ ಎತ್ತಿ ಬೆಂಬಲಿಸಿದ್ದರಿಂದ ಅವರು ಆಯ್ಕೆಯಾದರು’ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ್‌ ತಿಳಿಸಿದ್ದಾರೆ.ವಿಜಯೋತ್ಸವ: ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ರಕ್ಷೀತಾ ಸಾಹೆಬ್‌ಗೌಡ ಆಯ್ಕೆಯಾದ ಹಿನ್ನೆಲೆಯಲ್ಲಿ  ಕಾಂಗ್ರೆಸ್‌ ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ವಿಜಯ ನಾಯಕ ನೇತೃತ್ವದಲ್ಲಿ ಕಾರ್ಯಕರ್ತರು ಪಾಟಾಕಿ ಸಿಡಿಸಿ, ಒಬ್ಬರಿಗೊಬ್ಬರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry