ಸೋಮವಾರ, ಜೂನ್ 14, 2021
21 °C

ಅಧ್ಯಕ್ಷೆ ಪತಿರಾಯನ ದರ್ಬಾರು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ಪಟ್ಟಣದ ಪಟ್ಟಣ ಪಂಚಾಯ್ತಿ ಕಚೇರಿಯ ಮುಂದೆ ಅಧ್ಯಕ್ಷೆ ಪುಷ್ಪಲತಾ ಅವರ ಪತಿ ಗುತ್ತಿಗೆ  ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಖಂಡಿಸಿ ಬುಧವಾರ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.ಗುತ್ತಿಗೆ ಆಧಾರದ ಮೇಲೆ ಅಣ್ಣಪ್ಪ ಎಂಬ ಕಾರ್ಮಿಕ ಪಟ್ಟಣ ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆರು ತಿಂಗಳಿಂದ ವೇತನ  ನೀಡಿಲ್ಲ ಎಂದು ಕಚೇರಿಯ ಗುಮಾಸ್ತರಿಗೆ ಕೇಳಿ ಹೊರಬರುವ ಸಂದರ್ಭದಲ್ಲಿ ಎದುರಿಗೆ ಬಂದ ಅಧ್ಯಕ್ಷೆಯ ಪತಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ವಿಷಯ ತಿಳಿದ ಕೂಡಲೇ ಕಚೇರಿಯ ಪೌರ ನೌಕರರು ಹಾಗೂ ಕಾರ್ಮಿಕರು ಕಚೇರಿಯ ಮುಂದೆ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.ಪಟ್ಟಣ ಪಂಚಾಯ್ತಿ ನೌಕರರಿಗೆ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಹೇಳುವ ಅಧಿಕಾರ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಇರುತ್ತದೆ. ಆದರೆ, ಅವರ ಪತಿ ಮಧ್ಯೆ ಪ್ರವೇಶಿಸಿ ತಾನೇ ಅಧ್ಯಕ್ಷ ಎಂದುಕೊಂಡು ಕಚೇರಿಯ ಕೆಲಸ ಕಾರ್ಯಗಳಲ್ಲಿ ನಿರಂತರವಾಗಿ ಮೂಗು ತೂರಿಸುತ್ತಿದ್ದಾರೆ. ತಮ್ಮನ್ನು ನಿಂದಿಸಲು ಇವರಿಗೆ ಏನು ಅಧಿಕಾರ ಇದೆ ಎಂದು ಪ್ರಶ್ನಿಸಿದರು.ಸರ್ವಾಧಿಕಾರಿಯಂತೆ ಅಧ್ಯಕ್ಷರ ಪತಿ ಕಚೇರಿಯಲ್ಲಿ ನೌಕರರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರೆ. ಅಧ್ಯಕ್ಷರ ಪತಿಯ ವರ್ತನೆಯನ್ನು ಖಂಡಿಸಿ ಹಾಗೂ ಅವರು ಕ್ಷಮಾಪಣೆ ಕೇಳುವವರೆಗೂ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪೌರ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪ್ರಸಾದ್ ತಿಳಿಸಿದರು.ಉಪಾಧ್ಯಕ್ಷ ನಾರಾಯಣರಾವ್ ಇಂಗಳೆ ಸೇರಿದಂತೆ ಎಲ್ಲಾ ನೌಕರರು ಹಾಗೂ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.