ಶುಕ್ರವಾರ, ಏಪ್ರಿಲ್ 16, 2021
31 °C

ಅನಂತಮೂರ್ತಿ ಅವರಿಗೆ ಬಷೀರ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಜಿಕೋಡ್ :  ಜ್ಞಾನಪೀಠಪ್ರಶಸ್ತಿ ಪುರಸ್ಕೃತ ಸಾಹಿತಿ  ಹಾಗೂ ಹಾಗೂ ಶಿಕ್ಷಣ ತಜ್ಞ ಯು.ಆರ್. ಅನಂತಮೂರ್ತಿ ಅವರಿಗೆ 18ನೇ ಬಷೀರ್ ಪ್ರಶಸ್ತಿ ಲಭಿಸಿದೆ.ಕೊಲ್ಲಿ ರಾಷ್ಟ್ರಗಳಲ್ಲಿರುವ ಮಲೆಯಾಳಿಗಳ  ಸಾಂಸ್ಕೃತಿಕ ಸಂಘಟನೆ ~ಪ್ರವಾಸಿ ದೋಹಾ~ ನೀಡುತ್ತಿದೆ. ಪರಂಪರೆ ಜೊತೆಗಿನ ನಿರಂತರ ಸಂಘರ್ಷವನ್ನು ತಮ್ಮ ಸಾಹಿತ್ಯದಲ್ಲಿ ಅಭಿವ್ಯಕ್ತಿಸಿರುವ ಅನಂತಮೂರ್ತಿ ಪಾಶ್ಚಾತ್ಯ ಸಂಸ್ಕೃತಿಯನ್ನು ಆಧುನಿಕತೆಯ ಹೆಸರಿನಲ್ಲಿ ಕುರುಡಾಗಿ ಅನುಕರಿಸುವವರಿಂದಲೂ ಭಿನ್ನರಾಗಿದ್ದಾರೆ.  ಅವರು ಭಾರತೀಯ ಸಂಸ್ಕೃತಿಯ ಬಹುತ್ವವನ್ನು ಒಂದು ವಾಸ್ತವ ಎಂದು ಪರಿಗಣಿಸಿರುವ ಲೇಖಕ ಎಂದು ಆಯ್ಕೆ ಸಮಿತಿಯಲ್ಲಿ ಒಬ್ಬರಾದ ಎಂ.ಟಿ. ವಾಸುದೇವನ್ ನಾಯರ್ ತಿಳಿಸಿದರು.ಯು 50 ಸಾವಿರ ನಗದು ಹಾಗೂ ಖ್ಯಾತ ಕಲಾವಿದ ನಂಬೂದರಿ ಅವರಿಂದ ರಚಿತವಾದ ಕಲಾಕೃತಿಯನ್ನು ಒಳಗೊಂಡಿದೆ.ವೈಕಂ ಮಹಮದ್ ಬಷೀರ್ ಅವರನ್ನು ಜಗತ್ತಿನ ಬೇರೆ ಬೇರೆ ದೇಶಗಳಿಗೆ ಪರಿಚಯಿಸುವುದರಲ್ಲಿ ಅನಂತಮೂರ್ತಿ ಅವರ ಪಾತ್ರ ಮುಖ್ಯ ಎಂದು ಆಯ್ಕೆ ಸಮಿತಿ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.