ಅನಂತಮೂರ್ತಿ `ಪೂನಂ ಪಾಂಡೆ' ಇದ್ದಂತೆ: ಆಯನೂರು

7

ಅನಂತಮೂರ್ತಿ `ಪೂನಂ ಪಾಂಡೆ' ಇದ್ದಂತೆ: ಆಯನೂರು

Published:
Updated:

ಶಿವಮೊಗ್ಗ (ಡಿಎಚ್‌ಎನ್‌ಎಸ್):  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ ಅವರು ರೂಪದರ್ಶಿ ಪೂನಂ ಪಾಂಡೆ ಇದ್ದಂತೆ ಎಂದು ಬಿಜೆಪಿಯ ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.

ಮೋದಿ ಭಾರತದ ಪ್ರಧಾನಿಯಾದರೆ ನಾನು ಭಾರತದಲ್ಲಿ ಇರಲಾರೆ ಎಂಬ ಅನಂತಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಯನೂರು ಮಂಜುನಾಥ್,  ಅನಂತಮೂರ್ತಿ ಅವರನ್ನು ಪೂನಂ ಪಾಂಡೆಗೆ ಹೋಲಿಸುವ ಮೂಲಕ ಲೇವಡಿ ಮಾಡಿದ್ದಾರೆ.ಭಾರತ ವಿಶ್ವ ಕಪ್ ಗೆದ್ದಾಗ ಸಾರ್ವಜನಿಕವಾಗಿ ಬೆತ್ತಲಾಗುತ್ತೇನೆ ಎಂದು ಪೂನಂ ಪಾಂಡೆ ಹೇಳಿಕೆ ನೀಡಿದ್ದರು. ಅವರಂತೆಯೇ ಅನಂತಮೂರ್ತಿ ಕೆಟ್ಟ ಹೇಳಿಕೆಗಳನ್ನು ನೀಡುವ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆಯನೂರು ಕಿಡಿಕಾರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry