ಅನಗತ್ಯ ವಿವಾದ: ಉಮೇಶ ಕತ್ತಿ ಸ್ಪಷ್ಟನೆ

7

ಅನಗತ್ಯ ವಿವಾದ: ಉಮೇಶ ಕತ್ತಿ ಸ್ಪಷ್ಟನೆ

Published:
Updated:

ಬೆಂಗಳೂರು: `ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ~ ಎಂದು ಕೃಷಿ ಸಚಿವ ಉಮೇಶ ವಿ.ಕತ್ತಿ ಶನಿವಾರ ಇಲ್ಲಿ ಸ್ಪಷ್ಟಪಡಿಸಿದರು.`ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಕುಟುಂಬದಿಂದ ಬಂದವನು ನಾನು. ರಾಜ್ಯ ವಿಭಜನೆಯ ಹೇಳಿಕೆ ನನ್ನಿಂದ ಬಂದಿಲ್ಲ~ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.  `2020ರ ವೇಳೆಗೆ ಸಣ್ಣ ರಾಜ್ಯಗಳ ರಚನೆ ಆಗಬಹುದು. ಆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಕೂಡ ಪ್ರತ್ಯೇಕ ರಾಜ್ಯವಾಗುವ ಅವಕಾಶ ಇದೆ ಎಂದು ಹೇಳಿದ್ದೆ.ಇದರ ಹೊರತಾಗಿ ಬೇರೆ ಏನೂ ಹೇಳಿಲ್ಲ. ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ~ ಎಂದು ಆಕ್ಷೇಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry