ಅನಗತ್ಯ ವಿವಾದ

7

ಅನಗತ್ಯ ವಿವಾದ

Published:
Updated:

ಕರ್ತವ್ಯಲೋಪ ಇಲ್ಲವೆ ಅಪರಾಧಗಳು ನಡೆದಾಗ ವಿವಾದಗಳನ್ನು ಸೃಷ್ಟಿಸಿ ಗೊಂದಲ ನಿರ್ಮಿಸುವ ಮೂಲಕ  ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಆಡಳಿತಾರೂಢರು ಮಾಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೊನೆಗೆ ವಿವಾದಗಳೇ ಹೆಚ್ಚು ಚರ್ಚೆಗೀಡಾಗಿ ಮೂಲವಿಷಯ ಮೂಲೆಗುಂಪಾಗುವ ಅಪಾಯ ಇದೆ. ದೆಹಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆಸಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೇ ಹಾದಿಯಲ್ಲಿ ಸಾಗುವ ಅಪಾಯ ಕಾಣುತ್ತಿದೆ.ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರಿಗೆ ಬರೆದ ಅಧಿಕೃತ ಪತ್ರ ಮಾಧ್ಯಮಗಳಿಗೆ ಸೋರಿಹೋಗಿ ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸುವಾಗ ವಿಡಿಯೋ ಚಿತ್ರೀಕರಣಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ ಮತ್ತು ತಾವು ಸಿದ್ದಪಡಿಸಿದ್ದ ಪ್ರಶ್ನೆಗಳನ್ನೇ ಕೇಳುವಂತೆ ಒತ್ತಡ ಹೇರಿದ್ದರು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಉಷಾ ಚತುರ್ವೇದಿ ಅಸಮಾಧಾನ ವ್ಯಕ್ತಪಡಿಸಿರುವುದು ಈಗಿನ ವಿವಾದ. ಈ ದೂರನ್ನು ಉಲ್ಲೇಖಿಸಿ ಪತ್ರ ಬರೆದಿರುವ ಶೀಲಾ ದೀಕ್ಷಿತ್ ಪೊಲೀಸರ ಪಾತ್ರದ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಪಡಿಸಿದ್ದಾರೆ. ಎರಡು ದಿನಗಳ ಹಿಂದೆ ನಗರ ಪೊಲೀಸ್ ಆಯುಕ್ತರು ಘಟನೆಯ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕೆಂದೂ ಹೇಳಿದ್ದರು. ಇದರಿಂದ ತಿರುಗಿಬಿದ್ದಿರುವ ಪೊಲೀಸರು ಮೂಲ ವಿಷಯವನ್ನೇ ಪಕ್ಕಕ್ಕಿಟ್ಟು ಮುಖ್ಯಮಂತ್ರಿಗಳು ಬರೆದ ರಹಸ್ಯಪತ್ರ ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಯಿತು ಎನ್ನುವ ಬಗ್ಗೆ ತನಿಖೆ ನಡೆಯಬೇಕೆಂದು ಪಟ್ಟುಹಿಡಿದಿದ್ದಾರೆ.ಅತ್ಯಾಚಾರಕ್ಕೀಡಾದ ವಿದ್ಯಾರ್ಥಿನಿ ಕಳೆದ ಇಪ್ಪತ್ತು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವಾಗ ದೆಹಲಿಯ ಮುಖ್ಯಮಂತ್ರಿಗಳು, ಕೇಂದ್ರಗೃಹಸಚಿವರು ಮತ್ತು ಪೊಲೀಸರು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಅಮಾನವೀಯ ನಡವಳಿಕೆ. ದೇಶದ ಉಳಿದೆಲ್ಲ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಅಲ್ಲಿನ ರಾಜ್ಯಸರ್ಕಾರದಡಿಯಲ್ಲಿಯೇ ಇದ್ದರೆ, ದೆಹಲಿಯಲ್ಲಿ ಮಾತ್ರ ಅದು ಕೇಂದ್ರ ಗೃಹ ಇಲಾಖೆಯಡಿ ಇದೆ. ಪೊಲೀಸ್ ಇಲಾಖೆಯನ್ನು ತಮಗೆ ಒಪ್ಪಿಸಬೇಕೆಂದು ಮುಖ್ಯಮಂತ್ರಿ ಶೀಲಾದೀಕ್ಷಿತ್ ಕಳೆದ ಹತ್ತುವರ್ಷಗಳಿಂದ ಕೇಳುತ್ತಿದ್ದಾರೆ. ಇದು ಹಳೆಯ ವಿವಾದ. ಈ ಜಗಳವನ್ನು ಕೆದಕಲು ಈಗ ಕಾಲ ಅಲ್ಲ.  ದೆಹಲಿಯಲ್ಲಿ ಪೊಲೀಸರು ರಾಜ್ಯಸರ್ಕಾರದ ನಿಯಂತ್ರಣದಲ್ಲಿದ್ದಿದ್ದರೆ ಅದು ನಿಷ್ಠೆ ಮತ್ತು ಕ್ಷಮತೆಯಿಂದ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಲು ಆಧಾರಗಳು ಸಿಗುವುದಿಲ್ಲ.ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಮಹಾನಗರದ ಜನತೆಯ ಆಕ್ರೋಶದ ಬಿಸಿ ತನಗೆ ತಾಗದಿರಲಿ ಎನ್ನುವ ಕಾರಣಕ್ಕಾಗಿಯೇ ಶೀಲಾ ದೀಕ್ಷಿತ್  ಕೇಂದ್ರ ಸರ್ಕಾರ ಮತ್ತು ಪೊಲೀಸರ ಕಡೆ ಬೆಟ್ಟುಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟ. ಪೊಲೀಸರಿಂದ ಲೋಪವಾಗಿದ್ದರೆ ಖಂಡಿತ ಆ ಬಗ್ಗೆ ತನಿಖೆ ನಡೆಯಲಿ. ಅತ್ಯಾಚಾರ ಕಾನೂನು ತಿದ್ದುಪಡಿಗೆ ಸಲಹೆಗಳನ್ನು ನೀಡಲು ಈಗಾಗಲೇ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ನೇತೃತ್ವದ ಒಂದು ಸಮಿತಿ ರಚನೆಯಾಗಿದೆ. ಈಗ ಇನ್ನೊಂದು ತನಿಖಾ ಸಮಿತಿ ನೇಮಕಗೊಂಡಿದೆ. ಇದರ ಜತೆಗೆ ಪೊಲೀಸರ ತನಿಖೆ ಕೂಡಾ ನಡೆಯುತ್ತಿದೆ. ಈ ಸರಣಿ ತನಿಖೆಗಳ ಗೋಜಲಿನಲ್ಲಿ ಅತ್ಯಾಚಾರಗೈದ ದುಷ್ಕರ್ಮಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲೂ ಇದೆ.ಕರ್ತವ್ಯಲೋಪ ಇಲ್ಲವೆ ಅಪರಾಧಗಳು ನಡೆದಾಗ ವಿವಾದಗಳನ್ನು ಸೃಷ್ಟಿಸಿ ಗೊಂದಲ ನಿರ್ಮಿಸುವ ಮೂಲಕ  ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಆಡಳಿತಾರೂಢರು ಮಾಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೊನೆಗೆ ವಿವಾದಗಳೇ ಹೆಚ್ಚು ಚರ್ಚೆಗೀಡಾಗಿ ಮೂಲವಿಷಯ ಮೂಲೆಗುಂಪಾಗುವ ಅಪಾಯ ಇದೆ. ದೆಹಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆಸಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೇ ಹಾದಿಯಲ್ಲಿ ಸಾಗುವ ಅಪಾಯ ಕಾಣುತ್ತಿದೆ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರಿಗೆ ಬರೆದ ಅಧಿಕೃತ ಪತ್ರ ಮಾಧ್ಯಮಗಳಿಗೆ ಸೋರಿಹೋಗಿ ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸುವಾಗ ವಿಡಿಯೋ ಚಿತ್ರೀಕರಣಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ ಮತ್ತು ತಾವು ಸಿದ್ದಪಡಿಸಿದ್ದ ಪ್ರಶ್ನೆಗಳನ್ನೇ ಕೇಳುವಂತೆ ಒತ್ತಡ ಹೇರಿದ್ದರು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಉಷಾ ಚತುರ್ವೇದಿ ಅಸಮಾಧಾನ ವ್ಯಕ್ತಪಡಿಸಿರುವುದು ಈಗಿನ ವಿವಾದ.ಈ ದೂರನ್ನು ಉಲ್ಲೇಖಿಸಿ ಪತ್ರ ಬರೆದಿರುವ ಶೀಲಾ ದೀಕ್ಷಿತ್ ಪೊಲೀಸರ ಪಾತ್ರದ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಪಡಿಸಿದ್ದಾರೆ. ಎರಡು ದಿನಗಳ ಹಿಂದೆ ನಗರ ಪೊಲೀಸ್ ಆಯುಕ್ತರು ಘಟನೆಯ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕೆಂದೂ ಹೇಳಿದ್ದರು. ಇದರಿಂದ ತಿರುಗಿಬಿದ್ದಿರುವ ಪೊಲೀಸರು ಮೂಲ ವಿಷಯವನ್ನೇ ಪಕ್ಕಕ್ಕಿಟ್ಟು ಮುಖ್ಯಮಂತ್ರಿಗಳು ಬರೆದ ರಹಸ್ಯಪತ್ರ ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಯಿತು ಎನ್ನುವ ಬಗ್ಗೆ ತನಿಖೆ ನಡೆಯಬೇಕೆಂದು ಪಟ್ಟುಹಿಡಿದಿದ್ದಾರೆ.

ಅತ್ಯಾಚಾರಕ್ಕೀಡಾದ ವಿದ್ಯಾರ್ಥಿನಿ ಕಳೆದ ಇಪ್ಪತ್ತು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವಾಗ ದೆಹಲಿಯ ಮುಖ್ಯಮಂತ್ರಿಗಳು, ಕೇಂದ್ರಗೃಹಸಚಿವರು ಮತ್ತು ಪೊಲೀಸರು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಅಮಾನವೀಯ ನಡವಳಿಕೆ. ದೇಶದ ಉಳಿದೆಲ್ಲ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಅಲ್ಲಿನ ರಾಜ್ಯಸರ್ಕಾರದಡಿಯಲ್ಲಿಯೇ ಇದ್ದರೆ, ದೆಹಲಿಯಲ್ಲಿ ಮಾತ್ರ ಅದು ಕೇಂದ್ರ ಗೃಹ ಇಲಾಖೆಯಡಿ ಇದೆ. ಪೊಲೀಸ್ ಇಲಾಖೆಯನ್ನು ತಮಗೆ ಒಪ್ಪಿಸಬೇಕೆಂದು ಮುಖ್ಯಮಂತ್ರಿ ಶೀಲಾದೀಕ್ಷಿತ್ ಕಳೆದ ಹತ್ತುವರ್ಷಗಳಿಂದ ಕೇಳುತ್ತಿದ್ದಾರೆ.ಇದು ಹಳೆಯ ವಿವಾದ. ಈ ಜಗಳವನ್ನು ಕೆದಕಲು ಈಗ ಕಾಲ ಅಲ್ಲ.  ದೆಹಲಿಯಲ್ಲಿ ಪೊಲೀಸರು ರಾಜ್ಯಸರ್ಕಾರದ ನಿಯಂತ್ರಣದಲ್ಲಿದ್ದಿದ್ದರೆ ಅದು ನಿಷ್ಠೆ ಮತ್ತು ಕ್ಷಮತೆಯಿಂದ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಲು ಆಧಾರಗಳು ಸಿಗುವುದಿಲ್ಲ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಮಹಾನಗರದ ಜನತೆಯ ಆಕ್ರೋಶದ ಬಿಸಿ ತನಗೆ ತಾಗದಿರಲಿ ಎನ್ನುವ ಕಾರಣಕ್ಕಾಗಿಯೇ ಶೀಲಾ ದೀಕ್ಷಿತ್  ಕೇಂದ್ರ ಸರ್ಕಾರ ಮತ್ತು ಪೊಲೀಸರ ಕಡೆ ಬೆಟ್ಟುಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟ. ಪೊಲೀಸರಿಂದ ಲೋಪವಾಗಿದ್ದರೆ ಖಂಡಿತ ಆ ಬಗ್ಗೆ ತನಿಖೆ ನಡೆಯಲಿ. ಅತ್ಯಾಚಾರ ಕಾನೂನು ತಿದ್ದುಪಡಿಗೆ ಸಲಹೆಗಳನ್ನು ನೀಡಲು ಈಗಾಗಲೇ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ನೇತೃತ್ವದ ಒಂದು ಸಮಿತಿ ರಚನೆಯಾಗಿದೆ. ಈಗ ಇನ್ನೊಂದು ತನಿಖಾ ಸಮಿತಿ ನೇಮಕಗೊಂಡಿದೆ. ಇದರ ಜತೆಗೆ ಪೊಲೀಸರ ತನಿಖೆ ಕೂಡಾ ನಡೆಯುತ್ತಿದೆ. ಈ ಸರಣಿ ತನಿಖೆಗಳ ಗೋಜಲಿನಲ್ಲಿ ಅತ್ಯಾಚಾರಗೈದ ದುಷ್ಕರ್ಮಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry