ಭಾನುವಾರ, ಜನವರಿ 19, 2020
23 °C

ಅನಧಿಕೃತ ಕೇಬಲ್ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು (ಒಎಫ್‌ಸಿ) ಪತ್ತೆ ಹಚ್ಚಿ ತೆರವುಗೊಳಿಸುವ ಕಾರ್ಯವನ್ನು ತೀವ್ರಗೊಳಿಸಲಾಗುವುದು~ ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದ್ದಾರೆ.

 

`ಪೂರ್ವ, ಪಶ್ಚಿಮ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಒಟ್ಟು 20,666 ಮೀಟರ್ ಉದ್ದದ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಿದ್ದಾರೆ~ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಡಿಸೆಂಬರ್ 23ರಿಂದ 30ರವರೆಗೆ ಬೊಮ್ಮನಹಳ್ಳಿ ವಲಯದಲ್ಲಿ 12,820 ಮೀಟರ್, ಡಿಸೆಂಬರ್ 30 ರಿಂದ ಜ. 2 ರವರೆಗೆ ಪೂರ್ವ ವಲಯದಲ್ಲಿ 3,396 ಮೀಟರ್ ಮತ್ತು ಜನವರಿ 2 ಹಾಗೂ 3ರಂದು ಪಶ್ಚಿಮ ವಲಯದಲ್ಲಿ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 4,450 ಮೀಟರ್ ಉದ್ದದ ಕೇಬಲ್ ತೆರವುಗೊಳಿಸಿದ್ದಾರೆ. ಡಿ. 23ರಿಂದ ಈವರೆಗೆ ಒಟ್ಟು 53,007 ಮೀಟರ್ ಉದ್ದದ ಅನಧಿಕೃತ ಕೇಬಲ್ ತೆರವು ಮಾಡಲಾಗಿದೆ.

ಪ್ರತಿಕ್ರಿಯಿಸಿ (+)