ಅನಧಿಕೃತ ತರಕಾರಿ ಅಂಗಡಿ ತೆರವು

7

ಅನಧಿಕೃತ ತರಕಾರಿ ಅಂಗಡಿ ತೆರವು

Published:
Updated:

ಕೊಳ್ಳೇಗಾಲ: ಪಟ್ಟಣದ ಕನ್ನಿಕಾ ಪರಮೇಶ್ವರಿ ರಸ್ತೆಯ ಐತಿಹಾಸಿಕ ಚಂದ್ರ ಪುಷ್ಕರಣಿ ಬಳಿ ಅನಧಿಕೃತವಾಗಿ ವ್ಯಾಪಾರದಲ್ಲಿ ತೊಡಗಿದ್ದ ತರಕಾರಿ ಅಂಗಡಿಗಳನ್ನು ಗುರುವಾರ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.ಲಕ್ಷಾಂತರ ವೆಚ್ಚಮಾಡಿ ತರಕಾರಿ ಅಂಗಡಿ ನಿರ್ಮಾಣ ಮಾಡಿದ್ದರೂ ಅದರ ಉಪಯೋಗ ಪಡೆಯದೇ ಪವಿತ್ರ ಐತಿಹಾಸಿಕ ಚಂದ್ರಪುಷ್ಕರಣಿ ಮರೆಯಾಗುವಂತೆ ಹಾಗೂ ರಸ್ತೆಯಲ್ಲಿ ಜನರ ಓಡಾಟಕ್ಕೆ ಸಂಚಕಾರ ಉಂಟಾಗಿದ್ದ ಹಿನ್ನೆಲೆಯಲ್ಲಿ ತರಕಾರಿ ಅಂಗಡಿ ತೆರವುಗೊಳಿಸಲಾಯಿತು.ನಗರಸಭೆ ಪೌರಾಯುಕ್ತ ಬಸವರಾಜು ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿಯನ್ನು ಒಳಗೊಂಡ ತಂಡ ಗೊಂದಲಕ್ಕೆ ಅವಕಾಶ ನೀಡದಂತೆ ತೆರವು ಮಾಡಲಾಯಿತು.ಮುಂಜಾನೆ 4 ಗಂಟೆಗೆ ಪಟ್ಟಣದ ಮಸೀದಿ ವೃತ್ತದಲ್ಲಿ ತಹಶೀಲ್ದಾರ್ ಸುರೇಶ್‌ಕುಮಾರ್, ಪೌರಾಯುಕ್ತ ಬಸವರಾಜು, ಸರ್ಕಲ್ ಇನ್‌ಸ್ಪೆಕ್ಟರ್ ರವಿನಾಯಕ್, ಪಟ್ಟಣ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸಂದೀಪ್‌ಕುಮಾರ್ ಹಾಗೂ ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಯಿತು.ದೊಡ್ಡಮಸೀದಿ ಬಳಿಯಿಂದ ಎಲ್ಲಾ ತರಕಾರಿ ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ನಂತರ ಎದುರಿನ ಅಂಗಡಿ ಮಾಲೀಕರು ಚರಂಡಿ ಮೇಲೆ ಒತ್ತುವರಿ ಮಾಡಿ ನಿರ್ಮಿಸಿದ್ದ ಮೆಟ್ಟಿಲು ತೆರವುಗೊಳಿಸಲಾಯಿತು.ಕಾರ್ಯಾಚರಣೆ ನಂತರ ಮಾತನಾಡಿದ ತಹಶೀಲ್ದಾರ್ ಸುರೇಶ್‌ಕುಮಾರ್, ಚಂದ್ರ ಪುಷ್ಕರಣಿಯನ್ನು ತರಕಾರಿ ಮಾರುಕಟ್ಟೆ ಅಂಗಡಿಗಳಿಂದ ಸಾರ್ವಜನಕರಿಗೆ ಕಾಣದಂತಾ ಗಿತ್ತು. ತೆರವುಗೊಳಿಸಲಾಗಿದೆ. ಪುಷ್ಕರಣಿ ಅಭಿವೃ ದ್ಧಿಪಡಿಸಲಾಗುವುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry