ಮಂಗಳವಾರ, ಮೇ 11, 2021
22 °C

`ಅನಧಿಕೃತ ಬಂದೂಕು ಜಪ್ತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅನಧಿಕೃತ ಬಂದೂಕು ಜಪ್ತಿ'

ಚಾಮರಾಜನಗರ: `ಪ್ರಸ್ತುತ ಜಿಲ್ಲೆಯಲ್ಲಿ 639 ಮಂದಿ ಬಂದೂಕು ಪರವಾನಗಿ ಪಡೆದಿದ್ದಾರೆ. ಇದುವರೆವಿಗೂ ಯಾರೊಬ್ಬರು ದುರುಪಯೋಗ ಪಡಿಸಿ ಕೊಂಡಿಲ್ಲ. ಹನೂರು ಮತ್ತು ಯಳಂದೂರು ಭಾಗದಲ್ಲಿ ಅನಧಿಕೃತ ವಾಗಿ ಹೊಂದಿದ್ದ ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಹೇಳಿದರು.ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗುರುವಾರ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಬಂದೂಕು ತರಬೇತಿ ಜತೆಗೆ ಕಾನೂನು ಅರಿವು ಕೂಡ ಆವಶ್ಯಕ. ಬಂದೂಕು ಹೊಂದಿರುವ ವ್ಯಕ್ತಿಗಳು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಮಕ್ಕಳಿಂದ ಬಂದೂಕನ್ನು ದೂರವಿಡಬೇಕು. ಶಿಬಿರದಲ್ಲಿ ಬಂದೂಕು ಬಳಕೆ, ರಕ್ಷಣೆ ಇತ್ಯಾದಿ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದರು.ಜಿಲ್ಲೆಯಲ್ಲಿ ಬಂದೂಕು ತರಬೇತಿ ನೀಡುವ ನುರಿತ ಪೊಲೀಸ್ ಸಿಬ್ಬಂದಿ ಇಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಹೈದರಾಬಾದ್‌ಗೆ ತರಬೇತಿಗಾಗಿ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. ಬಂದೂಕು ಪರವಾನಗಿ ಹೊಂದಿ ರುವವರು ಯಾವುದೇ ಕಾರಣಕ್ಕೂ ಪ್ರಾಣಿಗಳ ಮೇಲೆ ಗುಂಡು ಹಾರಿಸುವಂತಿಲ್ಲ. ಜಿಲ್ಲೆಯಲ್ಲಿ ಹಲವು ಮಂದಿ ಬಂದೂಕು ಪಡೆಯಲು ಅನುಮತಿಗಾಗಿ ಅರ್ಜಿ ಹಾಕುತ್ತಿದ್ದರು. ಆದರೆ, ಅವರಿಗೆ ತರಬೇತಿ ಇರಲಿಲ್ಲ. ಫೈರಿಂಗ್ ಮಾಡಲು ಸ್ವಂತ ಮೈದಾನ ಕೂಡ ಇರಲಿಲ್ಲ. ಈಗ ಯಡಬೆಟ್ಟದ ಹತ್ತಿರ ಸ್ಥಳ ಮಂಜೂರಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಎಂ.ಎಸ್. ಗೀತಾ, ಇನ್‌ಸ್ಪೆಕ್ಟರ್‌ಗಳಾದ ನಿರಂಜನ್, ಶೇಖರ್, ಅನ್ಸರ್ ಅಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.