ಭಾನುವಾರ, ಮೇ 16, 2021
22 °C

ಅನಧಿಕೃತ ಭಿತ್ತಿಫಲಕಗಳಿಗೆ ಗಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:ಅನಧಿಕೃತ ಹಾಗೂ ಲೈಸನ್ಸ್ ನವೀಕ ರಿಸದ ಜಾಹೀರಾತು ಫಲಕ (ಹೋರ್ಡಿಂಗ್)ಗಳ ವಿರುದ್ಧ ಸಮರ ಸಾರಿರುವ ಮಹಾನಗರ ಪಾಲಿಕೆ, ಗುರುವಾರ ಅಂತಹ ಫಲಕಗಳನ್ನು ತೆಗೆದುಹಾಕುವ ಕಾರ್ಯಾಚರಣೆ ಆರಂಭಿಸಿದೆ. ಮೊದಲ ದಿನವೇ 15 ಬೃಹತ್ ಫಲಕಗಳು ಧರೆಗುರುಳಿದ್ದು, ಅವುಗಳೆಲ್ಲ ಪಾಲಿಕೆ ಅಂಗಳ ಸೇರಿವೆ .ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ ಗಳನ್ನು ಹೊಂದಿರುವ ಹಲವು ಏಜೆನ್ಸಿಗಳು ಸುಮಾರು ಆರು ಲಕ್ಷ ರೂಪಾಯಿ ಬಾಕಿ ತುಂಬದಿರುವುದೇ ಈ ಕಠಿಣ ಕ್ರಮಕ್ಕೆ ಕಾರಣ ವಾಗಿದೆ. ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕ ಚಂದ್ರ ಅವರ ಆದೇಶದ ಮೇರೆಗೆ ವಾಸುದೇವ ರಾಯ್ಕರ್ ನೇತೃತ್ವದ ಸಿಬ್ಬಂದಿ ಈ ಕಾರ್ಯಾ ಚರಣೆ ಆರಂಭಿಸಿದೆ.ದೀಪದ ವ್ಯವಸ್ಥೆ ಹೊಂದಿದ ಫಲಕ್ಕೆ ಪ್ರತಿ ಚದರ ಅಡಿಗೆ ವಾರ್ಷಿಕ 21ರೂಪಾಯಿ ಹಾಗೂ ದೀಪದ ವ್ಯವಸ್ಥೆ ಹೊಂದಿರದ ಫಲಕಕ್ಕೆ ಪ್ರತಿ ಚದರ ಅಡಿಗೆ ವಾರ್ಷಿಕ 14 ರೂಪಾಯಿ ದರ ನಿಗದಿಪಡಿಸಲಾಗಿದೆ. ಜೊತೆಗೆ ಸೇವೆ ಮತ್ತಿತರ ತೆರಿಗೆ ಮೊತ್ತವನ್ನೂ ಅದೇ ಏಜನ್ಸಿಗಳು ತುಂಬಬೇಕು ಎನ್ನುವ ಕರಾರನ್ನೂ ಹಾಕಲಾಗಿದೆ.`ಹಲವು ಏಜೆನ್ಸಿಗಳು ವರ್ಷಗಳಿಂದ ಬಾಡಿಗೆ ಹಾಗೂ ತೆರಿಗೆ ತುಂಬದೆ ಬಾಕಿ ಉಳಿಸಿಕೊಂಡಿದ್ದು, ಸಾಕಷ್ಟು ಸಲ ನೋಟಿಸ್ ನೀಡಿದರೂ ಸ್ಪಂದಿಸಿಲ್ಲ. ಆದ್ದರಿಂದಲೇ ಅಂತಹ ಏಜನ್ಸಿಗಳ ಫಲಕಗಳನ್ನು ತೆಗೆದು ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ~ ಎಂದು ಅಧಿಕಾರಿಗಳು ತಿಳಿಸಿದರು.ಈದ್ಗಾ ಮೈದಾನದಲ್ಲಿದ್ದ ನಾಗರಾಜ ರೇವ ಣಕರ್ ಎಂಬುವವರಿಗೆ ಸೇರಿದ ಫಲಕ, ಕೋರ್ಟ್ ಸರ್ಕಲ್ ಬಳಿಯ ಜಗದೀಶ ಏಜನ್ಸಿಗೆ ಸೇರಿದ ಫಲಕ, ಉಷಾ ಹೋಟೆಲ್ ಮೇಲಿದ್ದ ಫಲಕ, ದೇಸಾಯಿ ಸರ್ಕಲ್ ಬಳಿಯಿದ್ದ ಪಾಪ್ಯುಲರ್ ಆ್ಯಡ್ಸ್ ಫಲಕ, ರೈಲ್ವೆ ಮೈದಾನ ಹತ್ತಿರವಿದ್ದ ದೀಪಕ ಏಜನ್ಸಿ ಫಲಕ, ಬಸವರಾಜ ಶೆಟ್ಟೆಪ್ಪನವರ ಎಂಬುವವರಿಗೆ ಸೇರಿದ ಹೊಸೂರು ಸರ್ಕಲ್‌ನಲ್ಲಿದ್ದ ಫಲಕ, ಶೆಲ್ಲಿಕೇರಿ ಹಾಗೂ ತುಮಕೂರು ಓಣಿ ಯಲ್ಲಿದ್ದ ಫಲಕಗಳನ್ನು ತೆಗೆದು ಹಾಕಲಾಗಿದೆ.ದೇಸಾಯಿ ಸರ್ಕಲ್‌ನಲ್ಲಿ ಸಾವಿರ ಚದರ ಅಡಿಯ ಬೃಹತ್ ಫಲಕದಲ್ಲಿ ಮಲಬಾರ್ ಗೋಲ್ಡ್ಸ್‌ಗೆ ಸಂಬಂಧಿಸಿದ ಜಾಹೀರಾತು ಇತ್ತು. ಅಲ್ಲಿಯೇ ಇದ್ದ ಇಂಡಿಯನ್ ಬ್ಯಾಂಕ್, ಹೊಸೂರಿನ ರೋಹಿತ್ ಏಜನ್ಸಿ ಸೂಟ್‌ಕೇಸ್ ಜಾಹೀರಾತುಗಳು ಕೆಲವೇ ಕ್ಷಣಗಳಲ್ಲಿ ಧರೆಗುರುಳಿದವು.ಟ್ರ್ಯಾಕ್ಟರ್ ಹಾಗೂ ಗ್ಯಾಸ್ ಕಟರ್‌ಗಳೊಂದಿಗೆ ಸಿದ್ಧವಾಗಿ ಬಂದಿದ್ದ ಸಿಬ್ಬಂದಿ, ಕಂಬಗಳನ್ನು ಬುಡಸಹಿತ ಕತ್ತರಿಸಿ, ಬೃಹತ್ ಫಲಕಗಳನ್ನು ನೆಲಕ್ಕೆ ಉರುಳಿಸುತ್ತಿದ್ದರು. ನಂತರ ಅವುಗಳನ್ನು ಬಿಡಿ ಬಿಡಿಯಾಗಿ ಮಾಡಿ ಟ್ರ್ಯಾಕ್ಟರ್‌ಗೆ ತುಂಬುತ್ತಿದ್ದರು.`ಅನಧಿಕೃತವಾಗಿ ಬಹಳ ಫಲಕಗಳನ್ನು ಹಾಕಲಾಗಿದೆ. ಲೈಸನ್ಸ್ ನವೀಕರಿಸದ ಫಲಕಗಳೂ ಸಾಕಷ್ಟಿವೆ. ಸಂಚಾರ ವ್ಯವಸ್ಥೆಗೆ ಕೆಲವು ಫಲಕಗಳಿಂದ ತೊಂದರೆಯಾಗಿತ್ತು. ಈ ಕುರಿತು ಪಾಲಿಕೆಗೆ ಹಲವು ದೂರುಗಳೂ ಬಂದಿದ್ದವು. ಅಂತಹ ಎಲ್ಲ ಫಲಕ ಗಳನ್ನು ತೆಗೆದು ಹಾಕಿದ್ದೇವೆ~ ಎಂದು ಅಧಿಕಾರಿಗಳು ವಿವರಿಸಿದರು.`ಬೆಂಗಳೂರಿನ ಪಾಪ್ಯುಲರ್ ಆ್ಯಡ್ಸ್ ಸಂಸ್ಥೆ ರೈಲ್ವೆ ಇಲಾಖೆ ಜಾಗದಲ್ಲಿ ಜಾಹೀರಾತು ಫಲಕ ನಿಲ್ಲಿಸಲು ಸ್ಥಳ ಗುತ್ತಿಗೆ ಪಡೆದಿದೆ. ಆದರೆ, ಪಾಲಿಕೆಗೆ ತುಂಬ ಬೇಕಾದ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಆದ್ದರಿಂದ ಆ ಸಂಸ್ಥೆಯ ಫಲಕಗಳನ್ನು ತೆಗೆದಿದ್ದೇವೆ~ ಎಂದು ಹೇಳಿದರು.`ಬಹುತೇಕ ಜಾಹೀರಾತು ಏಜೆನ್ಸಿಗಳ ಮುಖ್ಯ ಸ್ಥರಿಗೆ ದೂರವಾಣಿ ಕರೆ ಮಾಡಿದರೆ ಸ್ಪಂದಿಸಿಲ್ಲ. ನೋಟಿಸ್ ನೀಡಿದರೂ ಅವರಿಂದ ಪ್ರತಿಕ್ರಿಯೆ ಬರ ಲಿಲ್ಲ. ಪೊಲೀಸರ ಸಹಾಯ ಪಡೆದು ಕಾರ್ಯಾ ಚರಣೆ ಆರಂಭಿಸಿದೆವು~ ಎಂದು ಅವರು ತಿಳಿಸಿದರು. ಎಸಿಪಿ ಎ.ಆರ್. ಬಡಿಗೇರ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.