ಮಂಗಳವಾರ, ಜುಲೈ 14, 2020
25 °C

ಅನನ್ಯ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನನ್ಯ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ

 ಸಿನಿಮಾ, ಸಾಹಿತ್ಯ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ನಳಿನಿ ವೆಂಕಪ್ಪ ಅವರ ‘ಅನನ್ಯ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ’ ಯುವಜನರಿಗೆ ಸ್ಫೂರ್ತಿದಾಯಕ ಆಗಬಲ್ಲ ಪುಸ್ತಕ. ಸ್ವತಂತ್ರ ಭಾರತದ ಪ್ರಥಮ ಸೇನಾನಿಯಾದ ಕಾರ್ಯಪ್ಪನವರು ತಮ್ಮ ಸೇನಾ ಚಟುವಟಿಕೆಗಳು ಮಾತ್ರವಲ್ಲದೆ, ಸಾಮಾಜಿಕ ವ್ಯಕ್ತಿತ್ವದಿಂದಲೂ ದೇಶವನ್ನು ಪ್ರಭಾವಿಸಿದ ಅಪರೂಪದ ನಾಯಕರಲ್ಲೊಬ್ಬರು. ಸೇನಾನಿ ಆಗಿದ್ದುಕೊಂಡು ಯುದ್ಧರಹಿತ ದಿನಗಳ ಕನಸು ಕಂಡಿದ್ದ ಕಾರ್ಯಪ್ಪ ಸಮಾಜದ ಆರೋಗ್ಯವನ್ನೇ ತಮ್ಮ ಜೀವನದ ಧ್ಯೇಯವಾಗಿಸಿಕೊಂಡವರು.ಅನನ್ಯ ಚೇತನ ಕಾರ್ಯಪ್ಪನವರ ಬದುಕು-ಸಾಧನೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ನಳಿನಿ ವೆಂಕಪ್ಪ ಅವರು ಆಸಕ್ತಿ-ಆಸ್ಥೆಯಿಂದ ಮಾಡಿದ್ದಾರೆ. ಸಾಕಷ್ಟು ವಿವರಗಳನ್ನು ಸಂಗ್ರಹಿಸಿ, ಅವುಗಳನ್ನು ‘ಜೀವನ ಚಿತ್ರ’ದ ಚೌಕಟ್ಟಿನಲ್ಲಿ ಓರಣವಾಗಿಸುವ ಅವರ ಪ್ರಯತ್ನ ಗಮನಸೆಳೆಯುವಂತಿದೆ.

ಅನನ್ಯ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ

ಲೇ: ನಳಿನಿ ವೆಂಕಪ್ಪ

ಪು: 140; ಬೆ: ರೂ. 100; ಪ್ರ: ಯಶಸ್ವಿ ಪ್ರಕಾಶನ, ‘ಸಂಕಲ್ಪ’, 43/4, 5ನೇ ಕ್ರಾಸ್, ಕಾಮಾಕ್ಯ ಲೇಔಟ್, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, 5ನೇ ಬ್ಲಾಕ್, ಬೆಂಗಳೂರು-560085


ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.