ಅನಪೇಕ್ಷಿತ ಎಸ್‌ಎಂಎಸ್‌ಗಳಿಂದ ಶೀಘ್ರ ಮುಕ್ತಿ

7

ಅನಪೇಕ್ಷಿತ ಎಸ್‌ಎಂಎಸ್‌ಗಳಿಂದ ಶೀಘ್ರ ಮುಕ್ತಿ

Published:
Updated:
ಅನಪೇಕ್ಷಿತ ಎಸ್‌ಎಂಎಸ್‌ಗಳಿಂದ ಶೀಘ್ರ ಮುಕ್ತಿ

ದೇಶದ ಸಾವಿರಾರು ಮೊಬೈಲ್ ಬಳಕೆದಾರರು ಶೀಘ್ರದಲ್ಲಿಯೇ ಅನಪೇಕ್ಷಿತ ಎಸ್‌ಎಂಎಸ್‌ಗಳಿಂದ ಮುಕ್ತಿ ಪಡೆಯಲಿದ್ದಾರೆ. ಹೌದು.  ಮುಂದಿನ ಆರು ವಾರಗಳಲ್ಲಿ ಡಿಎನ್‌ಡಿ (do not disturb number) ಸಂಖ್ಯೆ 1909 ಬಳಕೆಗೆ ಬರಲಿದ್ದು, ಟೆಲಿ ಮಾರುಕಟ್ಟೆ ಕಂಪೆನಿಗಳ ಅನಗತ್ಯ ಎಸ್‌ಎಂಎಸ್ ಕಿರಿ ಕಿರಿ ಕಾಟ ತಪ್ಪಲಿದೆ.ಮೊಬೈಲ್ ಬಳಕೆದಾರಿಗೆ ವಾಣಿಜ್ಯ ಉದ್ದೇಶದ ಎಸ್‌ಎಂಎಸ್‌ಗಳನ್ನು ಸ್ವೀಕರಿಸುವ ಅಥವಾ ಅವುಗಳ ಮೇಲೆ ನಿರ್ಬಂಧ ಹೇರುವ ಆಯ್ಕೆ ನೀಡಲಾಗಿದೆ. ಸುಮಾರು 7 ವಿಭಾಗಗಳಲ್ಲಿ ಇಂತಹ ಎಸ್‌ಎಂಎಸ್‌ಗಳನ್ನು ಗುರುತಿಸಲಾಗಿದೆ.ರಿಯಲ್ ಎಸ್ಟೇಟ್, ಕ್ರೆಡಿಟ್ ಕಾರ್ಡ್, ಬ್ಯಾಂಕಿಂಗ್, ಫೈನಾನ್ಸ್ ಇತರೆ ಸೇವೆಗಳಿಗೆ ಸಂಬಂಧಿಸಿದಂತೆ ಮೊಬೈಲ್ ಕಂಪೆನಿಗಳು ಕಳುಹಿಸುವ ವಾಣಿಜ್ಯ ಸಂದೇಶಗಳನ್ನು ಬಳಕೆದಾರು ರಾಷ್ಟ್ರೀಯ ಕರೆ ನಿಷೇಧ (Do-Not-Call -NDNC)  ಪಟ್ಟಿಯಲ್ಲಿ ಸೇರಿಸುವ ಮೂಲಕ ನಿರ್ಬಂಧಿಸಬಹುದು.

 

ಇದಕ್ಕಾಗಿ ಬಳಕೆದಾರ 1909 ಸಂಖ್ಯೆಗೆ ಸಂದೇಶ ಕಳುಹಿಸಬೇಕಾಗುತ್ತದೆ. ಇದು ಉಚಿತ. ಯಾವುದೇ ಶುಲ್ಕವಿಲ್ಲ ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.`ಡಿಎನ್‌ಡಿ~ ಉಲ್ಲಂಘನೆಗೆ ಸರ್ಕಾರ ಗರಿಷ್ಠ ದಂಡ ವಿಧಿಸುತ್ತದೆ. ಮೊದಲ ಅಪರಾಧಕ್ಕೆ 25 ಸಾವಿರ ದಂಡ ನಿಗದಿಪಡಿಸಲಾಗಿದೆ. ನಂತರವೂ ಇದು ಪುನರಾವರ್ತನೆಯಾದರೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಐದಕ್ಕಿಂತ ಹೆಚ್ಚು ಬಾರಿ ಕಾನೂನು ಉಲ್ಲಂಘಿಸಿದ ಟೆಲಿಮಾರುಕಟ್ಟೆ ಕಂಪೆನಿಯನ್ನೇ ಅಮಾನತಿನಲ್ಲಿ ಇಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry