ಶುಕ್ರವಾರ, ನವೆಂಬರ್ 22, 2019
27 °C

`ಅನಭಿಜ್ಞ ಶಾಕುಂತಲ' 26ನೇ ಪ್ರದರ್ಶನ

Published:
Updated:
`ಅನಭಿಜ್ಞ ಶಾಕುಂತಲ' 26ನೇ ಪ್ರದರ್ಶನ

`ಪ್ರಸಂಗ' ತಂಡ ಅಭಿನಯಿಸಿರುವ ಡಾ. ಕೆ.ವೈ. ನಾರಾಯಣಸ್ವಾಮಿ ಅವರ `ಅನಭಿಜ್ಞ ಶಾಕುಂತಲ' ಅತ್ಯಂತ ಕಡಿಮೆ ಅವಧಿಯಲ್ಲಿ 25 ಪ್ರದರ್ಶನಗಳನ್ನು ಪೂರ್ಣಗೊಳಿಸಿ 26ನೇ ಪ್ರದರ್ಶನಕ್ಕೆ ಸಜ್ಜಾಗಿದೆ.ಪ್ರಕಾಶ್ ಶೆಟ್ಟಿ ನಿರ್ದೇಶನದ ಈ ನಾಟಕ ಬೆಂಗಳೂರು, ಮೈಸೂರು, ಮುಂಬೈ, ಹೈದ್ರಾಬಾದ್, ತಿರುಪತಿ ಸೇರಿದಂತೆ, ರಾಜ್ಯದ ವಿವಿಧ ಸಾಂಸ್ಕೃತಿಕ ಕೇಂದ್ರಗಳಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದೆ. ನಾಟಕದ 26ನೇ ಪ್ರದರ್ಶನ ಏ. 19 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6ಕ್ಕೆ ನಡೆಯಲಿದೆ. ಈ ಖುಷಿಗಾಗಿ ಸಭಾ ಕಾರ್ಯಕ್ರಮವೂ ಏರ್ಪಾಡಾಗಿದೆ.ಅತಿಥಿಗಳು: ರಂಗಚಿಂತಕ ಡಾ. ಕೆ.ಮರುಳಸಿದ್ಧಪ್ಪ, ವಿಧಾನ ಪರಿಷತ್ ಸದಸ್ಯ ಅಶ್ವತ್ ನಾರಾಯಣ್, ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಹಾಗೂ ಡಾ. ಕೆ.ವೈ. ನಾರಾಯಣಸ್ವಾಮಿ.

ಪ್ರತಿಕ್ರಿಯಿಸಿ (+)