ಅನರ್ಹಗೊಳಿಸಲು ಹಿಂದೇಟು ಏಕೆ?

7

ಅನರ್ಹಗೊಳಿಸಲು ಹಿಂದೇಟು ಏಕೆ?

Published:
Updated:

ಬೆಂಗಳೂರು: ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದಕ್ಕೆ 16 ಶಾಸಕರನ್ನು ಕಾರಣವಿಲ್ಲದೆ ಅನರ್ಹಗೊಳಿಸಲಾಗಿತ್ತು. ಈಗ ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದವರನ್ನು ಅನರ್ಹಗೊಳಿಸಲು ಹಿಂದೇಟು ಏಕೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರು ಬಿಜೆಪಿಯನ್ನು ಪ್ರಶ್ನಿಸಿದರು.ಗುರುವಾರ ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆದ ಬಳಿಕ ಮೊಗಸಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ಬಿಜೆಪಿಯ ಢೋಂಗಿತನ ಈ ಪ್ರಕರಣದಲ್ಲಿ ಬಯಲಾಗಿದೆ. ದೇಶದ ಸಂಸ್ಕೃತಿ ರಕ್ಷಿಸುವ ವಕ್ತಾರರಂತೆ ಬಿಂಬಿಸಿಕೊಳ್ಳುವ ಸಂಘ ಪರಿವಾರದ ಗೋಸುಂಬೆತನವೂ ಬಹಿರಂಗವಾಗಿದೆ. ಈ ಶಾಸಕರನ್ನು ಅನರ್ಹಗೊಳಿಸದೇ ಇದ್ದರೆ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ~ ಎಂದರು.`ವಿಧಾನಸಭೆಯಲ್ಲಿ ನಡೆದ ಅಹಿತಕರ ಘಟನೆ ಕುರಿತು ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆಯಬೇಕಿತ್ತು. ಈ ಸದನದ ಮೂಲಕ ರಾಜ್ಯದ ಜನತೆಗೆ ಸಂದೇಶವೊಂದು ರವಾನೆ ಆಗಬೇಕಿತ್ತು. ಆದರೆ, ಸರ್ಕಾರದ ಮೊಂಡುತನದಿಂದ ಅದಕ್ಕೆ ಅವಕಾಶ ದೊರೆಯಲಿಲ್ಲ. ತನಿಖೆಯ ಹೆಸರಿನಲ್ಲಿ ಕಣ್ಣೊರೆಸುವ ಪ್ರಯತ್ನ ಸಲ್ಲದು~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry