ಅನಾಥ ಮಗುವಿಗೆ ಆಶ್ರಯವಾದ ದಂಪತಿ

7

ಅನಾಥ ಮಗುವಿಗೆ ಆಶ್ರಯವಾದ ದಂಪತಿ

Published:
Updated:
ಅನಾಥ ಮಗುವಿಗೆ ಆಶ್ರಯವಾದ ದಂಪತಿ

ಸವಣೂರ: ಹೊರಜಗತ್ತಿಗೆ ಕಣ್ತೆರೆ ಯುತ್ತಿದ್ದಂತೆ ಹೆತ್ತಮ್ಮನಿಗೆ ಬೇಡವಾದ ನವಜಾತ ಹೆಣ್ಣು ಶಿಶುವೊಂದು ಸವಣೂರಿನ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ. ರಸ್ತೆ ಅಂಚಿನ ಕಳ್ಳಿಗಿಡದ ಪೊದೆಯಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆ ಯಾದ ಮಗುವಿಗೆ ಈಗ ಸುರಕ್ಷಿತವಾದ ವಾತ್ಸಲ್ಯಪೂರ್ಣ ಮಡಿಲು ಲಭಿಸಿದೆ.ಸವಣೂರ ರೈಲು ನಿಲ್ದಾಣದ (ಜಲ್ಲಾಪುರ) ಬಳಿ  ಹುಬ್ಬಳ್ಳಿಗೆ ತೆರಳಲು ನಿಂತಿದ್ದ ಕಲಿವಾಳ ಗ್ರಾಮದ ಅಕ್ಕಮ್ಮ ಉಡಚಪ್ಪ ಕೋಲಕಾರ ದಂಪತಿ ಈ ಮಗುವಿನ ಪೋಷಣೆಗೆ ಮುಂದಾಗಿದ್ದಾರೆ. ಮಕ್ಕಳಿಲ್ಲದ ಕೊರಗಿನಲ್ಲಿದ್ದ ಈ ದಂಪತಿ ಈಗ ಕಾನೂನಿನ ಅನ್ವಯವೇ ಆ ಮಗುವನ್ನು ತಮ್ಮದಾಗಿಸಿಕೊಳ್ಳುವ ಸಂಭ್ರಮ ದಲ್ಲಿದ್ದಾರೆ.  ಜಗತ್ತನ್ನು ಕಾಣುವ ಮುನ್ನವೇ ಅದರ ಕ್ರೌರ್ಯವನ್ನು ಕಂಡ ಹೆಣ್ಣು ಮಗುವಿಗೆ ವಾತ್ಸಲ್ಯದ ಸಿಹಿ ಉಣಿಸಿದ್ದಾರೆ.

ಪೊದೆಗಳಲ್ಲಿ ಕೆಂಪಿರುವೆಗಳಿಂದ ಆವೃತವಾದ ಸ್ಥಿತಿಯಲ್ಲಿ ಪತ್ತೆಯಾದ ಮಗುವನ್ನು ಈ ದಂಪತಿ ರಕ್ಷಿಸಿ, ಉಪ ಚರಿಸಿದ್ದಾರೆ.  ಮಗು ಲಭ್ಯವಾಗಿರುವ ಬಗ್ಗೆ ಕಲಿವಾಳ ಗ್ರಾಮದ ಅಂಗನವಾಡಿ ಕೇಂದ್ರಕ್ಕೂ ಮಾಹಿತಿ ನೀಡಿದರು. ಬಳಿಕ ಸವಣೂರಿನ ಶಿಶು ಅಭಿವೃದ್ಧಿ ಯೋಜ ನಾಧಿಕಾರಿಗಳಿಗೂ ವರ್ತಮಾನ ತಿಳಿಸಿದರು.

ಹಾವೇರಿ ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದ ಮೇರೆಗೆ ಅನಾಥ ಮಗುವನ್ನು ಹುಬ್ಬಳ್ಳಿಯ ಶಿಶುಗೃಹದ ಸುಪರ್ದಿಗೆ ಕೊಡಲು ಮುಂದಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಭಾರತಿ     ಬಣಕಾರ, ಸವಣೂರ ಪೊಲೀಸ್ ಠಾಣೆ ಯಲ್ಲಿಯೂ ಪ್ರಕರಣ ದಾಖಲಿಸಿದರು.ಮಗುವನ್ನು ಪುನಾ ಕಳೆದುಕೊಳ್ಳುವ ಆತಂಕದಲ್ಲಿದ್ದ ದಂಪತಿ ಶಿಶು ಗೃಹಕ್ಕೆ ಅರ್ಜಿ ಸಲ್ಲಿಸಿ ಮಗುವನ್ನು ಪಡೆದು ಕೊಳ್ಳುವಂತೆಯೂ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry