ಸೋಮವಾರ, ಆಗಸ್ಟ್ 19, 2019
21 °C

ಅನಾಥ ಮಹಿಳೆ ಬದುಕು ದುರ್ಬರ

Published:
Updated:

ಲಿಂಗಸುಗೂರ (ಮುದಗಲ್ಲ): ಮುದಗಲ್ಲ ಪಟ್ಟಣದಲ್ಲಿ ಪೊಲೀಸ್ ಠಾಣೆ ಮುಂಭಾಗದ ಚರಂಡಿ ಮತ್ತು ಹಳೆ ಕಿರಾಣಿ ಬಜಾರಿನ ಹಾಳು ಕಟ್ಟಡ, ಕೋಟೆಯ ಅವಶೇಷಗಳ ಸುತ್ತಮುತ್ತ 18 ರಿಂದ 35 ವಯಸ್ಸಿನ ಮೂರ‌್ನಾಲ್ಕು ಮಹಿಳೆಯರು ಓಡಾಡುತ್ತಾರೆ. ಇವರು ಮಾನಸಿಕ ಅಸ್ವಸ್ಥರಂತೆ ಕಾಣುತ್ತಾರೆ. ಮೈಮೇಲಿನ ಬಟ್ಟೆಯ ಅರಿವಿಲ್ಲದೆ ಅಲೆದಾಡುತ್ತಾರೆ. ಇದರಿಂದ ಸಾರ್ವಜನಿಕರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.ಇವರಿಗೆ ಪಟ್ಟಣದ ಮಹಿಳೆಯರು ಅಳಿದುಳಿದ ಊಟ, ಉಪಾಹಾರ, ಹಳೆಯಬಟ್ಟೆ ನೀಡುತ್ತಿದ್ದಾರೆ. ಕೆಲವು ವೇಳೆ ಒಪ್ಪತ್ತಿನ ಊಟ ಸಿಗುವುದು ಅಪರೂಪ. ಚರಂಡಿ ನೀರು ಕುಡಿದು, ಮಣ್ಣು ಸೇವಿಸಿ ಕಾಲಹರಣ ಮಾಡುತ್ತಿದ್ದಾರೆ.

ಮನೆ, ಕುಟುಂಬದ ಸದಸ್ಯರು ಯಾರು ಎಂಬುದೇ ಇವರಿಗೆ ಗೊತ್ತಿಲ್ಲ.`ಬೀದಿಯಲ್ಲಿರುವ ಹರೆಯದ ಮಹಿಳೆ ಕುಡುಕರ ಹಾಗೂ ಕಾಮುಕರ ತೃಷೆಗೆ ಬಲಿಯಾಗಿ ಗರ್ಭಧರಿಸಿದ ನಿದರ್ಶನಗಳಿವೆ.

ಈ ಮಹಿಳೆಯರು ಅನ್ಯರೊಂದಿಗೆ ಏನನ್ನೂ ಮಾತನಾಡುವುದಿಲ್ಲ. ಇಂಥವರ ರಕ್ಷಣೆಗೆ ರೂಪಿಸಿದ   ಯೋಜನೆಗಳು ನೆರವಿಗೆ ಬಂದಿಲ್ಲ.ಪೊಲೀಸ್, ಸಮಾಜ ಕಲ್ಯಾಣ ಇಲಾಖೆ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಇವರತ್ತ ಗಮನಹಿಸಿಲ್ಲ' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

Post Comments (+)