ಅನಾರೋಗ್ಯಕ್ಕೆ ಬೀಗ ಮುದ್ರೆ! ಭಾಗ 9

7

ಅನಾರೋಗ್ಯಕ್ಕೆ ಬೀಗ ಮುದ್ರೆ! ಭಾಗ 9

Published:
Updated:

ಸರಳ ಧ್ಯಾನ ಮುದ್ರೆ

ಈ ಮುದ್ರೆಯನ್ನು ಧ್ಯಾನದ ಅಭ್ಯಾಸ ಮಾಡಲು ಉಪಯೋಗಿಸಲಾಗುತ್ತದೆ.

ಅಭ್ಯಾಸ ಕ್ರಮ: ಯಾವುದಾದರೂ ಒಂದು ಆಸನದಲ್ಲಿ (ಪದ್ಮಾಸನ, ವಜ್ರಾಸನ, ಸುಖಾಸನ, ಸಿದ್ಧಾಸನ, ಸ್ವಸ್ತಿಕಾಸನ) ಕುಳಿತು ಎಡಗೈ ಮೇಲೆ ಬಲಗೈಯನ್ನು  ಇಡಬೇಕು. ಈ ಸಂದರ್ಭದಲ್ಲಿ ಹೆಬ್ಬೆರಳು ಪರಸ್ಪರ ಮುಟ್ಟಿರಬೇಕು.

ಈ ಸ್ಥಿತಿಯಲ್ಲಿ ಕುಳಿತಾಗ ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿ ಇರಬೇಕು. ಸಾಮಾನ್ಯ ಉಸಿರಾಟವನ್ನು ಗಮನಿಸುತ್ತಾ ಇರಬೇಕು ಅಥವಾ ಇಷ್ಟ ದೇವರ ಧ್ಯಾನ ಮಾಡಬೇಕು. ಆರಂಭದಲ್ಲಿ 3ರಿಂದ 5, 10, 20 ನಿಮಿಷದವರೆಗೆ ಅಭ್ಯಾಸ ನಡೆಸಬಹುದು.ಪ್ರಯೋಜನ

ಮನಸ್ಸು ಶಾಂತ ಚಿತ್ತದಲ್ಲಿ ಮತ್ತು ನಿರಾಳವಾಗಿ ಇರುತ್ತದೆ.

ಆಧ್ಯಾತ್ಮಿಕ ಸಾಧನೆಗೆ ಈ ಮುದ್ರೆ ಸಹಕಾರಿ.ಮೂತ್ರಾಶಯ ಮುದ್ರೆ

ಇದು ಮೂತ್ರ ದೋಷಗಳ ನಿವಾರಣೆಗೆ ಸಹಕಾರಿ. ಚಿಕಿತ್ಸಾ ರೂಪದಲ್ಲಿ ಈ ಮುದ್ರೆಯನ್ನು ಬಳಸಬಹುದು.

ಅಭ್ಯಾಸ ಕ್ರಮ: ಕಿರು ಬೆರಳು ಮತ್ತು ಉಂಗುರ ಬೆರಳನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ, ಹೆಬ್ಬೆರಳನ್ನು ಈ ಮಡಚಿದ ಬೆರಳುಗಳ ಮೇಲೆ ಇಡಬೇಕು.ಪ್ರಯೋಜನ

ಕೆಲವೊಮ್ಮೆ ಹುಳಿ ಅಂಶ ಇರುವ ಹಣ್ಣುಗಳನ್ನು (ದ್ರಾಕ್ಷಿ, ಕಿತ್ತಳೆ, ಅನಾನಸು ಇತ್ಯಾದಿ) ತಿಂದಾಗ ಬರುವಂತಹ ಗಂಟಲು ಕೆರೆತವನ್ನು ಈ ಮುದ್ರೆಯ ಅಭ್ಯಾಸದಿಂದ ನಿವಾರಿಸಿಕೊಳ್ಳಬಹುದು. ಸುಮಾರು 10- 15 ನಿಮಿಷ ಅಭ್ಯಾಸ ಮಾಡಿದರೆ ಸಾಕು. ಮೂತ್ರಪಿಂಡಗಳ ಆರೋಗ್ಯ ರಕ್ಷಣೆಗೆ ಈ ಮುದ್ರೆ ಉಪಕಾರಿಯಾಗಿದೆ. ಜಲೋದರ ನಾಶಕ ಮುದ್ರೆಯ ಪ್ರಯೋಜನ ಈ ಮುದ್ರೆಯಲ್ಲೂ ದೊರಕುತ್ತದೆ.

ಗಮನಿಸಿ

ಮುದ್ರೆಗಳನ್ನು ಕುಳಿತಾಗ, ನಿಂತಾಗ, ಪ್ರಯಾಣಿಸುವಾಗ, ಮಲಗಿದ್ದಾಗ, ಟಿ.ವಿ ವೀಕ್ಷಿಸುವಾಗ... ಹೀಗೆ ಯಾವಾಗ ಬೇಕಾದರೂ ಮಾಡಬಹುದು. ಆದರೆ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ, ನೆಮ್ಮದಿ ದೊರಕುತ್ತದೆ.

ಎರಡೂ ಕೈಗಳಿಂದ ಮಾಡಿದರೆ ಹೆಚ್ಚು ಲಾಭ. ಮುದ್ರೆಗಳನ್ನು ಮಾಡುವಾಗ ಮನಸ್ಸು ನಿರ್ಮಲವಾಗಿರಲಿ. ಕೈಗಳು ಸಡಿಲವಾಗಿರಲಿ. ಹಸ್ತ ಮೇಲ್ಮಖವಾಗಿರಲಿ. ಮುಖದಲ್ಲಿ ಮುಗುಳ್ನಗು ಇರಲಿ. ಚಿಕಿತ್ಸಾ ರೂಪದಲ್ಲಿ ಯಾವುದೇ ಮುದ್ರೆಗಳನ್ನು ಮಾಡುವವರು ಕೊನೆಯಲ್ಲಿ 10 ನಿಮಿಷ ಪ್ರಾಣಮುದ್ರೆ ಹಾಕಬೇಕಾದುದು ಕಡ್ಡಾಯ. ಮುದ್ರೆಗಳನ್ನು ಮಾಡುವಾಗ ಉಸಿರಾಟ ಸಹಜವಾಗಿರಲಿ.

-ಗೋಪಾಲಕೃಷ್ಣ ದೇಲಂಪಾಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry