ಅನಾರೋಗ್ಯ: ಎರಡು ಕಾಡಾನೆ ಸಾವು

7

ಅನಾರೋಗ್ಯ: ಎರಡು ಕಾಡಾನೆ ಸಾವು

Published:
Updated:

ಗೋಣಿಕೊಪ್ಪಲು: ಮತ್ತಿಗೋಡು ಹಾಗೂ ಆನೆಚೌಕೂರು ವ್ಯಾಪ್ತಿಯ ಅರಣ್ಯದಲ್ಲಿ 2 ಕಾಡಾನೆಗಳು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.15 ವರ್ಷದ ಗಂಡಾನೆ ಹಾಗೂ 35 ವರ್ಷದ ಹೆಣ್ಣಾನೆ ಆನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಬೀಟ್‌ನಲ್ಲಿದ್ದಾಗ ಆನೆಗಳು ಮೃತಪಟ್ಟಿರುವುದು ಗೋಚರಿಸಿದೆ.ವಿಷಯ ತಿಳಿದ ಮತ್ತಿಗೋಡು ವಲಯ ಅರಣ್ಯಧಿಕಾರಿ ದೇವರಾಜು ಹಾಗೂ ನಾಗರಹೊಳೆ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ ಭೇಟಿ ನೀಡಿ ಪರೀಶಿಲಿಸಿದರು.ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ.ಉಮಾಶಂಕರ್ ಆನೆಗಳ ಶವ ಪರಿಕ್ಷೆ ನಡೆಸಿದರು. ಬಳಿಕ ಸುಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry