ಅನಾಹುತಕ್ಕೆ ಮುನ್ನ ಎಚ್ಚೆತ್ತುಕೊಳ್ಳಿ!

7

ಅನಾಹುತಕ್ಕೆ ಮುನ್ನ ಎಚ್ಚೆತ್ತುಕೊಳ್ಳಿ!

Published:
Updated:

ಕಂಟೋನ್‌ಮೆಂಟ್ ರೈಲ್ವೆ ಸ್ಟೇಷನ್‌ ನಿಂದ ಜಯಮಹಲ್ ಹಾಗೂ ನಂದಿದುರ್ಗ ರಸ್ತೆಗೆ ಹೋಗುವ ಮಾರ್ಗದಲ್ಲಿ ಇರುವ ಎರಡು ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆಯೇ ಇಲ್ಲ.ಸ್ವಲ್ಪ ಮಳೆ ಬಂದರೂ ರಸ್ತೆಯ ಮೇಲಿನ ನೀರು ಇಲ್ಲಿಯೇ ಹರಿದು ಬಂದು ನಿಲ್ಲುತ್ತದೆ. ಇದರಿಂದಾಗಿ ವಾಹನ ಚಾಲಕರು ಸಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಸ್ವಲ್ಪ ಜೋರಾಗಿ ಮಳೆ ಬಂದರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕು. ದ್ವಿಚಕ್ರ ವಾಹನ ಅರ್ಧ ಭಾಗ ಮುಳುಗಿ ಹೋಗುವಷ್ಟು ನೀರು ಇಲ್ಲಿ ನಿಲ್ಲುತ್ತದೆ.ಮಳೆ ನಿಂತು ಎರಡು ದಿನಗಳಾದರೂ ನೀರು ಹರಿದು ಹೋಗುತ್ತಿಲ್ಲ. ವಸಂತನಗರದ ಕಡೆಯಿಂದ ಈ ಭಾಗಗಳಿಗೆ ಹೋಗಲು ಬೇರೆ ಯಾವುದೇ ಮಾರ್ಗಗಳು ಇಲ್ಲ.

ಸಾವು ನೋವು ಸಂಭವಿಸುವ ಮುಂಚೆಯೇ ಸಂಬಂಧಿತ ಬಿಬಿಎಂಪಿ ಇತ್ತ ಗಮನ ಹರಿಸಬೇಕಾಗಿ ವಿನಂತಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry