ಗುರುವಾರ , ಆಗಸ್ಟ್ 22, 2019
26 °C

ಅನಿರ್ಬನ್, ಅರ್ಚನಾಗೆ ಪ್ರಶಸ್ತಿ

Published:
Updated:

ಬೆಂಗಳೂರು: ಅಮೋಘ ಪ್ರದರ್ಶನ ತೋರಿದ ಅನಿರ್ಬನ್ ರಾಯ್ ಚೌಧರಿ ಹಾಗೂ ಅರ್ಚನಾ ಕಾಮತ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡರು.ಮಲ್ಲೇಶ್ವರಂ ಸಂಸ್ಥೆಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅನಿರ್ಬನ್ 11-5,11-9,15-13,11-13,11-1 ರಲ್ಲಿ ಆರ್.ಬಿ. ರಕ್ಷಿತ್ ವಿರುದ್ಧ ಸುಲಭ ಗೆಲುವು ಪಡೆದರು. ಅರ್ಚನಾ 11-8, 11-7,11-1,11-3ರಲ್ಲಿ ಬಿಎನ್‌ಎಂ ಕ್ಲಬ್‌ನ ಐಶ್ವರ್ಯ ಆರ್. ಬಿದ್ರಿ ಅವರನ್ನು ಮಣಿಸಿದರು.

ಪುರುಷರ ವಿಭಾಗದ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯಗಳಲ್ಲಿ ಅನಿರ್ಬನ್ 11-9, 11-9, 11-8, 7-11, 13-11ರಲ್ಲಿ ಅನಿರ್ಬನ್ ತಾರಿಫ್‌ದಾರ್ ಮೇಲೂ, ರಕ್ಷಿತ್ 7-11, 11-8, 4-11, 11-7, 7-11, 11-7, 11-5ರಲ್ಲಿ ಸಗಾಯ್‌ರಾಜ್ ಎದುರು ಗೆಲುವು ಸಾಧಿಸಿ ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರು.ಮಹಿಳಾ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಅರ್ಚನಾ 10-12, 11-8, 11-9, 11-3, 8-11, 0-12, 11-7ರಲ್ಲಿ ವಿ. ಖುಷಿ ಅವರನ್ನು ಸೋಲಿಸಿದ್ದರು.ಪುರುಷರ ಡಬಲ್ಸ್‌ನಲ್ಲಿ ಶ್ರೇಯಾಲ್ ಕೆ. ತೆಲಾಂಗ್ ಹಾಗೂ ವಿ. ಪ್ರದೀಪ್ 13-11, 11-2, 11-9 ರಲ್ಲಿ ಆರ್. ಬಿ. ಸುಷ್ಮಿತ್-ಎಸ್.ಮದನ್ ಕುಮಾರ್ ಜೋಡಿಯನ್ನು ಮಣಿಸಿ ಪ್ರಶಸ್ತಿ ಜಯಿಸಿದರು.

Post Comments (+)