ಅನಿಲ್‌ ಕಪೂರ್‌ ಮಗ ಹರ್ಷವರ್ಧನ್‌ ಸಿನೆಮಾಗೆ

7

ಅನಿಲ್‌ ಕಪೂರ್‌ ಮಗ ಹರ್ಷವರ್ಧನ್‌ ಸಿನೆಮಾಗೆ

Published:
Updated:

‘‘ಹರ್ಷವರ್ಧನ್‌ನಲ್ಲಿ ಉತ್ಕಟ ಪ್ರೇಮಿಗಿರಬೇಕಾದ ಎಲ್ಲ ಭಾವಾತಿರೇಕದ ಗುಣಗಳಿವೆ. ಜೊತೆಗೆ ಗಾಂಭೀರ್ಯವೂ. ಇದೇ ಕಾರಣದಿಂದ ‘ಮಿರ್ಜಾ ಸಾಹಿಬಾ’ ಚಿತ್ರಕ್ಕಾಗಿ ಆಯ್ಕೆ ಮಾಡಲಾಗಿದೆ’’ ಎಂದು ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ಹೇಳಿದ್ದಾರೆ.ಕೇವಲ ಅನಿಲ್‌ ಕಪೂರ್‌ ಮಗ ಎಂಬ ಕಾರಣಕ್ಕಾಗಲೀ, ತಾರಾ ಪುತ್ರನ ಮೊದಲ ಚಿತ್ರ ಇದಾಗಲಿ ಎಂಬ ಮೋಹದಿಂದಾಗಲೀ ಈ ಆಯ್ಕೆಯಾಗಿಲ್ಲ. ಸಿನಿಮಾಕ್ಕೆ ಬೇಕಿರುವ ಎಲ್ಲ ಗುಣಗಳೂ ಹರ್ಷವರ್ಧನ್‌ನಲ್ಲಿ ಇವೆ. ಅವನೊಬ್ಬ ಉತ್ತಮ ಕಲಾವಿದ. ಸದ್ಯಕ್ಕೆ ಇನ್ನೂ ತರಬೇತಿ ಪಡೆಯುತ್ತಿದ್ದಾನೆ’ ಎನ್ನುವುದು ರಾಕೇಶ್‌ ಮೆಚ್ಚುಗೆಯ ಮಾತು.ಗುಲ್ಜಾರ್‌ ರಚನೆಯ ಸಂಗೀತಮಯ ಚಿತ್ರ ಇದಾಗಲಿದೆ. ನಾಯಕಿಗೆ  ಯಾರನ್ನೂ ಆಯ್ಕೆ ಮಾಡಿಲ್ಲ. ಕತೆ ಹಾಗೂ ನಾಯಕನನ್ನು ದೃಷ್ಟಿಯಲ್ಲಿರಿಸಿಕೊಂಡು ಆಯ್ಕೆ ಮಾಡಲಾಗುವುದು. ಹೊಸ ಮುಖವೇ ಹಳತೋ ಎಂಬುದಿನ್ನೂ ನಿರ್ಧಾರವಾಗಿಲ್ಲ ಎಂದು ಹೇಳುತ್ತಾರೆ ಅವರು.

ಹರ್ಷವರ್ಧನ್‌ ‘ಬಾಂಬೆ ವೆಲ್ವೆಟ್‌’ ಚಿತ್ರಕ್ಕೆ ಸಹ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry