ಅನಿಲ್ ಕುಮಾರ್ ಝಾ ಮುಖ್ಯ ಚುನಾವಣಾಧಿಕಾರಿ

6

ಅನಿಲ್ ಕುಮಾರ್ ಝಾ ಮುಖ್ಯ ಚುನಾವಣಾಧಿಕಾರಿ

Published:
Updated:

ಬೆಂಗಳೂರು: ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಝಾ ಅವರನ್ನು ರಾಜ್ಯದ ಮುಖ್ಯ ಚುನಾವಣಾ ಅಧಿ ಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಮತದಾರರ ಪಟ್ಟಿ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಹಾಲಿ ಮುಖ್ಯ ಚುನಾವಣಾಧಿಕಾರಿ ಡಾ. ಸಿ.ಎಸ್.ಸುರಂಜನ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಚುನಾವಣಾ ಆಯೋಗ, ಅವರನ್ನು ವರ್ಗಾವಣೆ ಮಾಡಿ ಬೇರೆಯವನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.ಆಯೋಗದ ಸೂಚನೆಯಂತೆ ಹೊಸ ಬರನ್ನು ನೇಮಕ ಮಾಡುವ ಸಂಬಂಧ ಅನಿಲ್‌ಕುಮಾರ್ ಝಾ ಅವರ ಹೆಸರನ್ನು ಸರ್ಕಾರ ಕಳುಹಿಸಿತ್ತು.  ಪರಿಶೀಲನೆ ನಂತರ ಆಯೋಗವು ಝಾ ಅವರ ನೇಮಕಕ್ಕೆ ಸಮ್ಮತಿಸಿದೆ ಎಂದು ತಿಳಿದು ಬಂದಿದೆ. ಝಾ ಅವರು 1988ನೇ ತಂಡದ ಐಎಎಸ್ ಅಧಿಕಾರಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry