ಅನಿಲ ಆಮದು: ಕ್ರಾಂತಿಕಾರಿ ಹೆಜ್ಜೆ
ಲಾಹೋರ್(ಪಿಟಿಐ): `ನೆರೆಯ ಭಾರತದಿಂದ ಪಾಕಿಸ್ತಾನಕ್ಕೆ ವಿದ್ಯುತ್ ಮತ್ತು ಅನಿಲ ಆಮದು ಮಾಡಿಕೊಳ್ಳುವ ನಿರ್ಧಾರ ಕ್ರಾಂತಿಕಾರಿ ಹೆಜ್ಜೆ~ ಎಂದು ಪ್ರಧಾನಿ ಯುಸೂಫ್ ರಜಾ ಗಿಲಾನಿ ಬಣ್ಣಿಸಿದ್ದಾರೆ.
`ಭಾರತ, ಇರಾನ್, ಚೀನಾ, ಆಪ್ಘಾನಿಸ್ತಾನ ಮತ್ತು ರಷ್ಯಾ ಜೊತೆಗೆ ನಮ್ಮ ಬಾಂಧವ್ಯ ಉತ್ತಮವಾಗಿದೆ. ಈ ಹಿಂದೆ ಯಾವತ್ತೂ ಇಂಥ ಉತ್ತಮ ಬಾಂಧವ್ಯ ಹೊಂದಿರಲಿಲ್ಲ~ ಎಂದು ಗಿಲಾನಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ತಿಳಿಸಿದರು.
`ಭಾರತದೊಂದಿಗಿನ ವಾಣಿಜ್ಯ ಒಪ್ಪಂದವು ನಮ್ಮ ಆರ್ಥಿಕತೆಗೆ ಅನುಕೂಲ. ಭಾರತದಿಂದ ವಿದ್ಯುತ್ ಮತ್ತು ಅನಿಲ ಆಮದು ವಿಷಯದಲ್ಲಿ ನಾವು ಅಳೆದು ನೋಡಿ ಕಾರ್ಯನಿರ್ವಹಿಸುತ್ತಿದ್ದೇವೆ~ ಎಂದರು. ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಘರ್ಷಣೆ ಬಗ್ಗೆ ಪ್ರತಿಕ್ರಿಯಿಸಿದ ಗಿಲಾನಿ, `ದೇಶದಲ್ಲಿ ಸೇನಾಡಳಿತ ಶಕೆ ಮುಗಿದ ಅಧ್ಯಾಯ. ಸೇನಾಡಳಿತಕ್ಕೆ ಅವಕಾಶವೇ ಇಲ್ಲ~ ಎಂದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಇಫ್ತಿಕಾರ್ ಚೌಧರಿ ಪುತ್ರ ಉದ್ಯಮಿಯೊಂದಿಗೆ ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, `ಸರ್ಕಾರವಾಗಲಿ ಅಥವಾ ಸೇನೆಯಾಗಲಿ ಈ ಹಗರಣದ ಲಾಭ ಪಡೆಯುವುದಿಲ್ಲ~ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.