ಅನಿಲ ವಿತರಣೆ ಏಜೆನ್ಸಿಯ ಕಾರ್ಯವೈಖರಿ

7

ಅನಿಲ ವಿತರಣೆ ಏಜೆನ್ಸಿಯ ಕಾರ್ಯವೈಖರಿ

Published:
Updated:

ಇಂಡೇನ್ ಅನಿಲ ವಿತರಣೆ ಮಾಡುವಲ್ಲಿ ಕಾದಿರಿಸಿದ ದಿನಾಂಕದ ಬದಲು ಏಜೆನ್ಸಿ ವಿತರಣೆ ಮಾಡಿದ ದಿನಾಂಕಕ್ಕೆ ಬದಲಾಯಿಸಿ ಗ್ರಾಹಕರಿಗೆ ತೊಂದರೆಯಾಗುವಂತಾಗಿದೆ. ನಾವು ಸಿಲಿಂಡರ್ ಕಾದಿರಿಸಿದ 15 ದಿನದ ನಂತರ ವಿತರಿಸಿ, ಆ ದಿನಾಂಕದಿಂದ ಮತ್ತೆ 21 ದಿನದ ನಂತರ ಎಂದು ಗುರುತಿಸಿ ಪುನಃ ವಿತರಣೆ ಮಾಡಲು 15 ದಿನ ವಿಳಂಬ ಮಾಡುತ್ತಾರೆ. ಅಲ್ಲಿಗೆ 15+21=36 ದಿನಗಳ ನಂತರ ನಮ್ಮ ಉಪಯೋಗಕ್ಕೆ ಸಿಲಿಂಡರ್ ಸಿಗುತ್ತದೆ.ಕಾಮಾಕ್ಯದಲ್ಲಿಯ ಏಜೆನ್ಸಿಯವರು ಇದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇಂಡೇನ್ ಗ್ಯಾಸ್ ಕಂಪೆನಿಯವರನ್ನು ವಿಚಾರಿಸಿದರೆ ಏಜೆನ್ಸಿಯವರನ್ನೇ ಸಮರ್ಥಿಸುತ್ತಾರೆ. ಪ್ರತ ಸಾರಿ 15 ದಿನ ಮುಂದೂಡಿ ವರ್ಷಕ್ಕೆ 180 ದಿನ ಕಡಿತ ಮಾಡಿ ಅರ್ಧ ವರ್ಷ ಕಡಿತದಲ್ಲಿ ಕಳೆದು ಬಿಟ್ಟಂತಾಯಿತು. ಇದು ಕಂಪೆನಿ ಗ್ರಾಹಕರ ಹಿತ ಕಾಯುವ ರೀತಿಯೇ? ಹಿಂದಿನ ಹಾಗೆ ಕಾದಿರಿಸುವ ದಿನಾಂಕವನ್ನೇ ಪುನಃ ಕಾರ್ಯರೂಪಕ್ಕೆ ತರಬೇಕಾಗಿ ವಿನಂತಿ.

– -ಸಾಲ್ಯಾನ್ ಪಡುಬಿದ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry