ಅನಿಲ ಸೋರಿಕೆ: ಐವರು ಆಸ್ಪತ್ರೆಗೆ

7

ಅನಿಲ ಸೋರಿಕೆ: ಐವರು ಆಸ್ಪತ್ರೆಗೆ

Published:
Updated:

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಬಳಿಯಿರುವ ಜಿವಿಆರ್ ಕ್ರಷರ್ ಪ್ಲಾಂಟ್‌ನ  ಹೈಡ್ರಾಲಿಕ್ ಘಟಕದಲ್ಲಿ  ಭಾನುವಾರ ಸಂಜೆ ಆಕಸ್ಮಿಕವಾಗಿ ರಾಸಾಯನಿಕ ಅನಿಲ ಸೋರಿಕೆಯ ಪರಿಣಾಮ ಒಟ್ಟು 5 ಜನರಿಗೆ ಸುಟ್ಟ ಗಾಯಗಳಾಗಿವೆ. ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ತೀವ್ರವಾಗಿ ಗಾಯಗೊಂಡ ಆಂಧ್ರಪ್ರದೇಶದ ಶ್ರೀಶೈಲಂ ಹಾಗೂ ಒಡಿಶಾದ ಸುಶಾಂತ ಅವರನ್ನು ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕಳಿಸಲಾಗಿದೆ. ಆಂಧ್ರಪ್ರದೇಶದ ನರೇಶ, ಭಾಸ್ಕರ ಹಾಗೂ ಒಡಿಶಾದ ಕಪಿಲೇಶ್ ಅವರನ್ನು ಬಳ್ಳಾರಿಯ ವಿಮ್ಸಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕ್ರಷರ್ ಪ್ಲಾಂಟ್‌ನಲ್ಲಿ ಹೈಡ್ರಾಲಿಕ್ ಘಟಕದ ಟ್ಯಾಂಕ್‌ನಲ್ಲಿ ನೈಟ್ರೋಜನ್ ಪೆರಾಕ್ಸೈಡ್ ಎಂಬ ರಾಸಾಯನಿಕ ಅನಿಲ ತುಂಬುವಾಗ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ. ಪ್ರಕರಣ ಕೂಡ್ಲಿಗಿ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry