ಅನುಕಂಪ ಗಿಟ್ಟಿಸಲು ಸಿಎಂ ಗಿಮಿಕ್: ಸಿದ್ದರಾಮಯ್ಯ

7

ಅನುಕಂಪ ಗಿಟ್ಟಿಸಲು ಸಿಎಂ ಗಿಮಿಕ್: ಸಿದ್ದರಾಮಯ್ಯ

Published:
Updated:

ತಿ.ನರಸೀಪುರ: ಮುಖ್ಯಮಂತ್ರಿ ಯಡಿಯೂರಪ್ಪ ಮಾಟ,ಮಂತ್ರ ವಾಮಾಚಾರದ ಆರೋಪಗಳನ್ನು ನಮ್ಮ ಮೇಲೆ  ಹೊರಿಸಿ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ಗುರುವಾರ ನಡೆದ ನಾಡರಕ್ಷಣಾ ರ್ಯಾಲಿ ಕಾರ್ಯಕರ್ತರ ಪೂರ್ವಭಾವಿ  ಸಭೆಯಲ್ಲಿ ಮಾತನಾಡಿದರು.ಮುಖ್ಯಮಂತ್ರಿಗೂ ತಮಗೂ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ ರಾಜ್ಯದ ಜನತೆ ನೀಡಿರುವ ಅಧಿಕಾರವನ್ನು ಸರಿಯಾಗಿ ಬಳಸಿ ಅಭಿವೃದ್ಧಿ ಮಾಡಿ ನೆಲ, ಜಲ ಸಂರಕ್ಷಣೆ ಮಾಡುವಂತೆ ಹೇಳಿದರೆ ಅವರಿಗೆ ಕೋಪ ಬರುತ್ತದೆ.  ಸಾಲದೆಂಬಂತೆ ವಾಮಾಚಾರ ಮಾರ್ಗವಾಗಿ ನನ್ನನ್ನು ಮುಗಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಕೇರಳ, ತಮಿಳುನಾಡುಗಳಲ್ಲಿ ಪೂಜೆ ಮಾಡಿಸಿ, ಮಾಟ ಮಂತ್ರ ಮಾಡಿಸುವವರು ಇವರು. ನನಗೆ ವಾಮಾ ಚಾರ, ಕಂದಾಚಾರಗಳಲ್ಲಿ ನಂಬಿಕೆ ಯಿಲ್ಲ.  ತಮ್ಮ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳಲು ವಿರೋಧ ಪಕ್ಷಗಳ ಮೇಲೆ ಕಥೆ ಕಟ್ಟುವ ಯಡಿಯೂರಪ್ಪ ಒಬ್ಬ ದುರ್ಬಲ ಮುಖ್ಯಮಂತ್ರಿ ಎಂದರು.ಶಾಸಕ ಡಾ.ಎಚ್.ಸಿ.ಮಹಾದೇವಪ್ಪ ಮಾತನಾಡಿ, ಮೈಸೂರು ಜಿ.ಪಂ ನಲ್ಲಿ ಅಧಿಕಾರದಾಸೆಗಾಗಿ ಬಿಜೆಪಿಯೊಂದಿಗೆ  ಅಧಿಕಾರ ಹಿಡಿದಿರುವ ಡೋಂಗಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ಜಿಲ್ಲಾ ಗ್ರಾಮಾಂತರ ಕಾಂಗ್ರಸ್ ಅಧ್ಯಕ್ಷ ಆರ್.ಧರ್ಮಸೇನಾ ನಾಡ ರಕ್ಷಣಾ ರ್ಯಾಲಿಯ ಬಗ್ಗೆ ಮಾಹಿತಿ   ನೀಡಿದರು.ಶಾಸಕ mಎಚ್.ಎಸ್.ಮಹಾದೇವಪ್ರಸಾದ್, ಎಸ್‌ಸಿ ಘಟಕದ ಅಧ್ಯಕ್ಷ ಡಿ.ಪದ್ಮನಾಭ, ಎಸ್‌ಟಿ ವಿಭಾಗದ  ಅಧ್ಯಕ್ಷ ಹೊನ್ನನಾಯಕ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಪಪಂ ಅಧ್ಯಕ್ಷ ಬಸವಣ್ಣ, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ ತಲಕಾಡು ಮಂಜು ನಾಥ್, ಬನ್ನೂರು ರವೀಂದ್ರಕುಮಾರ್, ಕೆಂಪಯ್ಯನಹುಂಡಿ ರಮೇಶ್  ಮುದ್ದೇ ಗೌಡ, ಪ್ರೊ. ಗೋವಿಂದಯ್ಯ,  ಜಿ.ಪಂ ಸದಸ್ಯರಾದ ಎಂ.ಸುಧಾ, ಕೆ.ಮಹಾ ದೇವ. ಭ್ರಮರಾಂಭ ಮಲ್ಲಿಕಾ ರ್ಜುನಸ್ವಾಮಿ, ತಾ.ಪಂ ಸದಸ್ಯರಾದ ಸಿ.ವೆಂಕ ಟೇಶ್, ನಟರಾಜು, ಮಲ್ಲಾಜಮ್ಮ, ಅಂದಾನಿ,  ಪಿ.ಸ್ವಾಮಿನಾಥ್‌ಗೌಡ.  ಬಿ.ವೀರಭದ್ರಪ್ಪ, ಅರುಣ್ ಕುಮಾರ್, ಮಹಾದೇವಣ್ಣ, ವೆಂಕಟೇಶ್(ವೆಂಕು), ನಾಗೇಶ್, ನಾಗರಾಜು, ಪಿ.ಪುಟ್ಟ ರಾಜು,  ಟಿ.ಎಂ.ನಂಜುಂಡಸ್ವಾಮಿ, ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮುಖಂಡರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry