ಅನುಚಿತ ವರ್ತನೆ: ಇಬ್ಬರು ಶಿಕ್ಷಕರ ಅಮಾನತು

7

ಅನುಚಿತ ವರ್ತನೆ: ಇಬ್ಬರು ಶಿಕ್ಷಕರ ಅಮಾನತು

Published:
Updated:

ಚನ್ನಪಟ್ಟಣ: ಇತ್ತೀಚೆಗೆ ನಗರದ ರೋಟರಿ ಬಾಲಭವನದಲ್ಲಿ ನಡೆದ ಮಳೂರು ಹೋಬಳಿ `ಗುರುಸ್ಪಂದನ~ದಲ್ಲಿ ಅನುಚಿತವಾಗಿ ವರ್ತಿಸಿದ್ದ ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಪಿ. ಪುಟ್ಟೇಗೌಡ ಹಾಗೂ ಕಾರ್ಯದರ್ಶಿ ರಾಮಕೃಷ್ಣಯ್ಯ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತು ಗೊಳಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನೇಗೌಡ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ, ಜಿಲ್ಲಾ ಪಂಚಾಯಿತಿ ಸದಸ್ಯರಾದದ ಯು.ಪಿ. ನಾಗೇಶ್ವರಿ ರಾಮಚಂದ್ರು, ರಘುಕುಮಾರ್ ಅವರು ಸಭಾ ಘನತೆಯನ್ನು ಕಡೆಗಣಿಸಿದ ಪುಟ್ಟೇಗೌಡ, ನಮ್ಮ ಸಂಘವನ್ನು ಬಿಇಓ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಲಾಖೆಯ ಯಾವುದೇ ಸಭೆ ಸಮಾರಂಭಗಳಿಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ. ಸಂಬಳ ಮಾಡಲು ಬಿಇಓ ಶಿಕ್ಷಕರಿಂದ ಲಂಚ ಪಡೆಯುತ್ತಾರೆಂದು ಆರೋಪಿಸಿದ್ದರು.ಸಂಘದ ಕಾರ್ಯದರ್ಶಿ ರಾಮಕೃಷ್ಣಯ್ಯ, ತಾಲ್ಲೂಕಿನ 639 ಶಿಕ್ಷಕರಿಂದ ವಸೂಲು ಮಾಡಿದ ಹಣದಲ್ಲಿ ತಲಾ 20ರೂ. ನಂತೆ ಪ್ರತಿ ಶಿಕ್ಷಕರಿಂದ ಸಂಗ್ರಹಿಸಿ ಸರ್ಕಾರಿ ನೌಕರರ ಸಂಘಕ್ಕೆ ಸ್ವಲ್ಪ ಮೊತ್ತವನ್ನು ನೀಡಿದ್ದಾರೆ.

ಈ ಅಧಿಕಾರ ಅವರಿಗೆ ಎಲ್ಲಿದೆ ? ಎಂಬುದನ್ನು ಸ್ಪಷ್ಟಪಡಿಸಬೇಕು. ಬಿಇಓ ಕಚೇರಿಯಲ್ಲಿ ಶಿಕ್ಷಕರನ್ನು ಬೆದರಿಸಲಾಗುತ್ತಿದ್ದು ಶಾಲಾ ಮಕ್ಕಳಿಗೆ ವಿತರಿಸಬೇಕಾದ ಸೈಕಲ್‌ಗಳನ್ನು ಗುರುಭವನದಲ್ಲಿ ಇಟ್ಟುಕೊಂಡು ಬಾಡಿಗೆ ಸ್ವಿಸಂಘದ ಕಾರ್ಯದರ್ಶಿ ರಾಮಕೃಷ್ಣಯ್ಯ ತಾಲ್ಲೂಕಿನ 639 ಶಿಕ್ಷಕರಿಂದ ವಸೂಲು ಮಾಡಿದ ತಲಾ 20 ರೂ. ಹಣವನ್ನು ಸರ್ಕಾರಿ ನೌಕರರ ಸಂಘಕ್ಕೆ ನೀಡಿದ್ದಾರೆ. ಈ ಅಧಿಕಾರ ಅವರಿಗೆ ಎಲ್ಲಿದೆ ? ಎಂಬುದನ್ನು ಸ್ಪಷ್ಟಪಡಿಸಬೇಕು. ಬಿಇಓ ಕಛೇರಿಯಲ್ಲಿ ಶಿಕ್ಷಕರನ್ನು ಬೆದರಿಸಲಾಗುತ್ತಿದ್ದು ಶಾಲಾ ಮಕ್ಕಳಿಗೆ ವಿತರಿಸ ಬೇಕಾದ ಸೈಕಲ್‌ಗಳನ್ನು ಗುರುಭವನದಲ್ಲಿ ಇಟ್ಟುಕೊಂಡು ಬಾಡಿಗೆ ಸ್ವೀಕರಿಸಲಾಗಿದೆ ಎಂದು ಆಪಾದಿಸಿದ್ದರು.  ಇದೀಗ ಕೆಸಿಎಸ್‌ಆರ್ ನಿಯಮ 1957ರ ಅಧಿನಿಯಮ 11ರನ್ವಯ ಬಿಇಓ ಅವರು ತಗಚಗೆರೆ ಸರ್ಕಾರಿ ಹಿರಿಯ ಪ್ರಾ.ಶಾಲೆ ಯಲ್ಲಿ ಸಹ ಶಿಕ್ಷಕರೂ ಆಗಿರುವ ಎಸ್.ಪಿ. ಪುಟ್ಟೇಗೌಡ, ಕೆಳಗೆರೆ ಸರ್ಕಾರಿ ಹಿರಿಯ ಪ್ರಾ.ಶಾಳೆಯ ಸಹ ಶಿಕ್ಷಕರಾಗಿರುವ ರಾಮಕೃಷ್ಣಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

 ಇಡೀ ಘಟನೆ ತಿರುವುಗಳನ್ನು ಪಡೆಯುತ್ತಿದ್ದು ಅಮಾನತು ತೆರವು ಗೊಳಿಸಲು ರಾಜಕೀಯ ಪ್ರಭಾವಗಳನ್ನು ಉಪಯೋಗಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಮೇಲೆ ತೂಗುಗತ್ತಿ ಬೀಸುತ್ತಿದ್ದು, ಇನ್ನಾರಿಗೆ ಅಶಿಸ್ತಿಗಾಗಿ ಅಮಾನತ್ತಿನ ಶಿಕ್ಷನ ಕಾದಿದೆಯೋ ಎಂಬ ಕುತೂಹಲ ಮೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry